ಶುಭವೆನ್ನಿರೆ ಎಲ್ಲ ಶುಭವೆನ್ನಿರೆ ಪ
ಅಭಯ ಹಸ್ತದಿ ಉಭಯಕುಶಲ ಕಾಯುವ ಹರಿಗೆ ಅ.ಪ
ಆಲದೆಲೆಯ ಮೇಲೆ ಪವಡಿಸಿ ಬಂದ
ಹಾಲುತನದ ಬದುಕ ಭೂಮಿಗೆ ತಂದ
ಹಾಲುಗಲ್ಲದ ಮುದ್ದÀು ಕೃಷ್ಣನು ಬರುತಿಹ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 1
ನಟ್ಟನಡುರಾತ್ರಿಯಲಿ ದಿಟ್ಟ ಕಾವಲಿನಲ್ಲಿ
ದಟ್ಟ ಕತ್ತಲನೆಲ್ಲ ಜಗದಿಂದ ಜಾಡಿಸುತ
ಬಟ್ಟ ಬೆಳಕನು ಬೀರಿ ಮೂಡುತಿಹ ಕೃಷ್ಣಂಗೆ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ2
ಅಷ್ಟಮಿಯ ದಿನದಂದು ರಂಗವಲ್ಲಿಯ ಮೇಲೆ
ಇಷ್ಟತಿಂಡಿಗಳನಿಷ್ಟಿಷ್ಟೆ ಮೆಲ್ಲಲು
ಪುಟ್ಟ ಹೆಜ್ಜೆಯನಿಟ್ಟು ಬರುತಿರುವ ಕೃಷ್ಣಂಗೆ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 3
ರುಕುಮಾಂಗದನ ತಂತ್ರ ಫಲಿಸದಂತಳಿಸಿ
ರುಕುಮಿಣಿಯ ಮನಗೆದ್ದು ರಥದ ಮೇಲಿರಿಸಿ
ಅಕ! ಅಲ್ಲಿ ಬರುತಿಹ ಮದುವಣಿಗ ಕೃಷ್ಣಂಗೆ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 4
ಚೆಲುವ ಚೆನ್ನಿಗ ನಮ್ಮ ಜಾಜೀಪುರೀಶಂಗೆ
ಶುಭವೆನ್ನಿರೆ ಎಲ್ಲ ಶುಭವೆನ್ನಿರೆ 5