ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ಪ ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ್ಯ ಚರಣ ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ ಕಾಶಿ ರಾಮೇಶ್ವರಕೆ ನಡೆದ ಚರಣ1 ಹಾವಿಗೆಯನೊಲ್ಲದೆ ಹಾದಿ ನಡೆದಿಹ ಚರಣ ದೇವಿ ಭಾಗೀರಥಿಗೆ ಇಳಿದ ಚರಣ ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ ಕೋವಿದರು ವಂದಿಸುವ ದಿವ್ಯ ಚರಣ2 ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ ಸೃಷ್ಟಿಗುತ್ತಮ ನದಿಯ ಮಿಂದ ಚರಣ ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ 3 ಶುದ್ಧ ವೈಷ್ಣವರೆಲ್ಲ ಉಜ್ಜಿ ತೊಳೆವ ಚರಣ ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ ಮಧ್ವರಾಯನ ಮತದಿ ಎದ್ದು ತಿರುಗುವ ಚರಣ ವಿದ್ಯೆನಿಧಿ ಗುರುರಾಯ ಬಾಳ್ದ ಚರಣ 4 ಧರಣಿಯನು ಬಲವಂದು ದಣಿದು ಬಂದಿಹ ಚರಣ ಕೈವಲ್ಯ ಪಡೆದ ಚರಣ ವರಾಹತಿಮ್ಮಪ್ಪನಿಹ ಗಿರಿಯನೇರಿದ ಚರಣ ಸ್ಥಿರವಾಗಿ ಉಡುಪಿಯೊಳು ನಿಂದ ಚರಣ 5
--------------
ವರಹತಿಮ್ಮಪ್ಪ
ಪ್ರಾಣಪತಿ ಹರಿ ವಿಠಲ | ಪೊರೆಯ ಬೇಕಿವನಾ ಪ ಕಾಣೆ ನೀನನ್ಯರನು | ಕ್ಷೋಣಿಯೊಳು ಹರಿಯೇ ಅ.ಪ. ಕೈಶೋರವಯನಿವನು | ಆಶೆಗೈವನು ದೀಕ್ಷೆದಾಸತ್ವದಲಿ ಮಾಳ್ಪ | ವಿಶ್ವಾಸಗಳನೂ |ಕೇಶವನೆ ತೈಜಸೀ | ವೇಷದಲಿ ಗುರುರೂಪಲೇಸಾಗಿ ತೋರಿಸುತ | ಆಶಿಸುತ್ತಿಹನೊ 1 ಗುರು ಹಿರಿಯರ ಸೇವೆ | ದೊರಕಿಸುತ ಇವನೀಗೆಪರತಮಜ್ಞಾನಾದಿ | ವರಸು ಸಾಧನವಾತರಳಂಗೆ ವದಗಿಸುತ | ಹರಿಯೆ ಉದ್ಧರಿಸಿವನಕರುಣಾ ಪಯೋನಿಧಿಯೆ | ಮರುತಾಂತರಾತ್ಮಾ 2 ಕಷ್ಟಗಳ ಪರಿಹರಿಸಿ | ಇಷ್ಟಗಳ ಸಲಿಸುತ್ತಕೃಷ್ಣ ಮೂರುತಿ ಹರಿಯೆ | ಕಾಪಾಡೊ ಇವನಾ |ದುಷ್ಠ ಭಕುತನ ಗೈದು | ಶಿಷ್ಟೇಷ್ಟರಲಿ ಇಟ್ಟುಶ್ರೇಷ್ಠ ಸಾಧನಗೈಸೊ | ಜಿಷ್ಣು ಸಖ ದೇವಾ 3 ಕಲಿಯುಗದಿ ಸಾಧನವು | ಸುಲಭವೆಂದೆನುತಲಲಿತ ವಚನಗಳಿಹವು | ಜಲಜಾಕ್ಷ ಹರಿಯೇ |ಕಲಿಮಲಾಪಹ ನಿನ್ನ | ಸ್ಮರಣೆಯನು ಒದಗಿಸುತಬಾಲಕನ ಸಲಹೆಂದು | ಭಿನ್ನವಿಪೆ ಸತತಾ 4 ನಿತ್ಯ ತವ ಲೀಲೆಗಳ | ಸ್ತುತಿಯನೇಗೈಸಿಕೃತ್ಸನೆಂದೆನಿಸಿವನ | ಸತ್ಯಾತ್ಮ ಹರಿಯೇ |ಸ್ತುತ್ಯ ಗುರು ಗೋವಿಂದ | ವಿಠಲ ಕರುಣಾಳುವೇಭೃತ್ಯನ್ನ ಪೊರೆಯೆಂದು | ಅರ್ಥಿಸುವೆ ನಿನಗೇ 5
--------------
ಗುರುಗೋವಿಂದವಿಠಲರು
ಭಕ್ತಜನ ಪಾಲಕ - ಭಕ್ತಿಸುಖದಾಯಕ ಮುಕ್ತೀಶ ದೀನಬಂಧು ಕೃಷ್ಣ ಪ ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ ಸತ್ಯವತಿ ಸುತÀನೆ ಕಾಯೋ ಕೃಷ್ಣ ಅ.ಪ. ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ | ಆನಂದದಲಿ ನಿಲಿಸೊ ಕೃಷ್ಣ || ದೀನಜನ ಮಂದಾರ ನೀನೆಂದು ನಂಬಿದೆನೊ | ಸಾನುರಾಗದಲಿ ಕಾಯೋ ಕೃಷ್ಣ 1 ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ | ಭ್ರಷ್ಟನಾಗಿ ಪೋದೆನೋ ಕೃಷ್ಣ || ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ | ಇಷ್ಟಗಳ ಎನಗೆ ಕೊಡಿಸೋ ಕೃಷ್ಣ 2 ಅಜಜನಕ ಗಜವರದ ಭುಜಗಶಯನನೆ ನಿನ್ನ | ಭಜಿಪ ಭಾಗ್ಯವನೆ ಕೊಡಿಸೊ ಕೃಷ್ಣ || ನಿಜವಾಗಿ ನಿನ್ಹೊರುತು ಸಲಹುವರ ನಾ ಕಾಣೆ |ವಿಜಯವಿಠ್ಠಲರೇಯ ಕೃಷ್ಣ 3
--------------
ವಿಜಯದಾಸ