ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯತು ಜಯತು ಜಯತೆಂಬೆನು ವಿಠಲ ಭಯನಿವಾರಣ ನಿರಾಮಯ ನೀನೆ ವಿಠಲಪ. ಮನವೆನ್ನ ಮಾತ ಕೇಳದು ಕಾಣೊ ವಿಠಲ ಮನಸಿಜನಾಯಸ ಘನವಾಯ್ತು ವಿಠಲ ನಿನಗಲ್ಲದಪಕೀರ್ತಿಯೆನಗೇನು ವಿಠಲ ತನುಮನದೊಳಗನುದಿನವಿರು ವಿಠಲ1 ಕದನ ಮುಖದಿ ಗೆಲುವುದ ಕಾಣೆ ವಿಠಲ ಮದನ ಮುಖ್ಯಾದಿ ವೈರಿಗಳೊಳು ವಿಠಲ ವಿಧವಿಧದಿಂದ ಕಷ್ಟಪಟ್ಟೆನು ವಿಠಲ ಇದಕೇನುಪಾಯ ತೋರಿಸಿ ಕಾಯೋ ವಿಠಲ2 ಹುಟ್ಟಿದೆ ನಾನಾ ಯೋನಿಗಳೊಳು ವಿಠಲ ಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲ ಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲ ಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ3 ಬಂಗಾರ ಭಂಡಾರ ಬಯಸೆನು ವಿಠಲ ಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲ ರಂಗ ರಂಗನೆಂಬ ನಾಮದಿ ವಿಠಲ ಭಂಗವ ಪರಿಹರಿಸಯ್ಯ ನೀ ವಿಠಲ4 ಏನು ಬಂದರೂ ಬರಲೆಂದಿಗು ವಿಠಲ ಮಾನಾವಮಾನ ನಿನ್ನದು ಕಾಣೊ ವಿಠಲ ನಾನು ನಿನ್ನವನೆಂದು ಸಲಹಯ್ಯ ವಿಠಲ ಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ5
--------------
ತುಪಾಕಿ ವೆಂಕಟರಮಣಾಚಾರ್ಯ
ಮರ್ದಳವನಿದ ಮನ್ನಿಸು ಮಾರಮಣವರ್ಧಿಸುವದಾನಂದವಸಿದ್ಧವಹ ಶಬ್ದಗಳನು ಸೂಚಿಸುತಲಿದ್ದು ಪ್ರೇರಿಪುದರ್ಥವ ಪಉಭಯ ಮುಖದಿಂದಲುದಿಸಿ ತಾನಿಂತುಶುಭತರಾಕೃತಿಯೆನ್ನಿಸಿಲಭಿಸುತ್ತ ನರ್ತಕಿಯನು ಲಾಲಿಸುತವಿಭು ನಿನ್ನ ನೋಲೈಪುದು 1ಸ್ಥೂಲತರ ಸ್ವನವಾದರೂ ಕಿಂಕಿಣೀಜಾಲಕಿದು ಜೋಡಾಗುತಪಾಲಿಸುತ ಪದಗತಿಯನು ಮನದ ಬಲಕಾಲಯವದಹುದೆನ್ನಲು2ಮೊದಲ ವರ್ಣವು ರುದ್ರನು ಮಧ್ಯದಲಿಹುದುಗಿದಕ್ಷರ ವಿಷ್ಣುವುತುದಿಳಕಾರವು ಬ್ರಹನು ಇಷ್ಟಕ್ಕೆಸದನವಾಗ್ಯನುಸರಿಸಲು 3ಮೂರು ಮೂರ್ತಿಗಳಂಗವ ವರ್ಣಗಳುತೋರೆ ನಡುವೆ ದಕಾರವಸೇರಿದ ರಕಾರ ತಾನು ವ್ಯಂಜನದಿತಾರಕಬ್ರಹ್ಮವಾಗೆ 4ಇಂತು ಮರ್ದಳವೆಸೆಯಲು ಇಂದಿರಾವಂತ ನೀ ಕಟ್ಟಿದಂತೆಕಂತುಪಿತ ತಿರುಪತೀಶಾ ಇಲ್ಲಿ ನೀನಿಂತು ಕೇಳ್ವೆಂಕಟೇಶಾ 5ಓಂ ಗೋಪಗೋಪೀಶ್ವರಾಯ ನಮಃ
--------------
ತಿಮ್ಮಪ್ಪದಾಸರು
ಯಾಕೆ ಬಳಲಿಸುವಿ ಗುರುರಾಯಾ ಇನ್ನು ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ ಭಕ್ತ ಕೇಳಿದರೆ ಕೊಡವಲ್ಲಿ ಉಪ- ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ ಶಕ್ತಿ ನಿನಗಿಹುದೋ ಕರದಲ್ಲಿ ವಿ- ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1 ತ್ರಾಹಿ ತ್ರಾಹಿ ಗುರುರಾಯಾ ಈಗ ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2 ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
--------------
ಹನುಮೇಶವಿಠಲ
ಲೋಕನೀತಿ (ಆ) ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ ಯಾತಕ್ಕೆ ತಡವಾಗೋದು | ಪ ತರಬೇಕೇಂದು ನೂರು ತಡವೆ ನಾ ನುಡಿದರು ಅರಿಯದವರ ಪರಿತಿರುಗುತ್ತಲಿರುವದು ಅ.ಪ ಮನೆ ಮನೆಯಲಿವಂದು ಮಾನಾರ್ಧಮಾನಗಳು ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ ಮನೆಗೆ ಬಂದು ಹಸಿವೆನುತ ಪೇಳುವದು 1 ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2 ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ- ಖರವ ಮಾಡುವುದು ಈ ಮನೆಯೊಳಿಲ್ಲಾ ಹಿರಿಯರಿಂದ ಬಂದ ಸಂಪ್ರದಾಯವಿದೇನೊ ಇಂಥಾಮನೆಯ ಸೇರಿ ಈ ಸುಖ ಪಡುವೆ 3 ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ ಬದಲು ಸೀರೆಯು ನಾನುಟ್ಟರಿಯೆ ವಿಧಿಲಿಖಿತವು ತಪ್ಪುವುದೆಯೆಂದಿಗಾದರು ವದರಿ ಕೊಂಡರೆಯೇನು ಇದರೊಳು ಫಲವುಂಟು 4 ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು ಈ ನರಜನ್ಮವು ಇಷ್ಟಕ್ಕೆಸಾಕೆಂದು ಧೇನಿಸಿ ಗುರುರಾಮವಿಠಲನ ಬೇಡುವೆ 5
--------------
ಗುರುರಾಮವಿಠಲ
ಜಯತು ಜಯತು ಜಯತೆಂಬೆನು ವಿಠಲಭಯನಿವಾರಣ ನಿರಾಮಯ ನೀನೆ ವಿಠಲ ಪ.ಮನವೆನ್ನ ಮಾತ ಕೇಳದು ಕಾಣೊ ವಿಠಲಮನಸಿಜನಾಯಸ ಘನವಾಯ್ತು ವಿಠಲನಿನಗಲ್ಲದಪಕೀರ್ತಿಯೆನಗೇನು ವಿಠಲತನುಮನದೊಳಗನುದಿನವಿರು ವಿಠಲ 1ಕದನಮುಖದಿ ಗೆಲುವುದ ಕಾಣೆ ವಿಠಲಮದನಮುಖ್ಯಾದಿ ವೈರಿಗಳೊಳು ವಿಠಲವಿಧವಿಧದಿಂದ ಕಷ್ಟಪಟ್ಟೆನು ವಿಠಲಇದಕೇನುಪಾಯ ತೋರಿಸಿ ಕಾಯೋ ವಿಠಲ 2ಹುಟ್ಟಿದೆ ನಾನಾ ಯೋನಿಗಳೊಳು ವಿಠಲಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ 3ಬಂಗಾರ ಭಂಡಾರ ಬಯಸೆನು ವಿಠಲಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲರಂಗ ರಂಗನೆಂಬ ನಾಮದಿ ವಿಠಲಭಂಗವ ಪರಿಹರಿಸಯ್ಯ ನೀ ವಿಠಲ 4ಏನು ಬಂದರೂ ಬರಲೆಂದಿಗು ವಿಠಲಮಾನಾವಮಾನ ನಿನ್ನದು ಕಾಣೊ ವಿಠಲನಾನು ನಿನ್ನವನೆಂದು ಸಲಹಯ್ಯ ವಿಠಲಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ