ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕು ಸಮ್ಮತನಾಗೆಲೋ ನೀ ನದಕುನು ಸಮ್ಮತನಾಗೆಲೊ ಪ ಇದು ಅದು ಎಂಬುದರ್ವಿಧವ ತಿಳಿದು ನೀ ನೆದಕುನು ಸಮ್ಮತನಾಗೆಲೊ ಅ.ಪ ಕಡುಸಿರಿಯೆಂಬುದು ಮರವೆಕುಣಿ ಬಡತನವೆಂಬುದು ಅರಿವಿನಮನೆ ಒಡೆತನವೆಂಬುದು ಪಾಪದ ಗೋಣು ದುಡಿತವೆಂಬುವುದು ಜ್ಞಾನದ ಖನಿ ದೃಢದಿಂದರಿದು ಹುಡುಕಾಡಿದರೋ ಳ್ಹಿಡಕೋ ನಿನಗೆ ಹಿತವಾವುದು ನೋಡಿ1 ಕೆಟ್ಟ ಸಂಸಾರ ಹೇಯಮೂತ್ರ ಕುಣಿ ನಿಷ್ಠೆ ಭಕ್ತಿ ಆನಂದಾಮೃತ ಖಣಿ ದುಷ್ಟಜನರ ಸಂಗ ನರಕಕುಣಿ ಶಿಷ್ಟ ಸಜ್ಜನಸಂಗ ಮುಕ್ತಿಮನೆ ನಿಷ್ಠೆಯಿಂದರಿತು ಇಷ್ಟರೊಳಗೆ ನೀ ಇಷ್ಟಕೆ ಬಂದದ್ದು ಹಿಡಕೋ ನೋಡಿ 2 ನರರ ಸೇವೆ ಮಹ ದುರಿತಬೇರು ಶರಣರ ಸೇವೆ ಸ್ಥಿರಸುಖದ ತವರು ಬರಿದೆ ಕೆಡದೆ ಹರಿಚರಣ ಕೋರು ಮರುಳು ಗುಣಗಳೆಲ್ಲ ತರಿದು ತೂರು ಧೀರ ಶ್ರೀರಾಮನ ಚಾರುಚರಣ ಸೇರಿ ಪರಮಪದವಿಯೊಳು ಲೋಲ್ಯಾಡು 3
--------------
ರಾಮದಾಸರು
ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ ಸಾಕಯ್ಯ ಇಲಿ ಬೆಕ್ಕಿನಾಟಾ ಪ ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ 1 ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ 2 ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ವೀರನಾರಾಯಣನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ 3
--------------
ವೀರನಾರಾಯಣ
ಗುರುರಾಯ ಪಾಲಿಸುವುದು ನೀ ಎನ್ನ ಪ ಅನ್ಯರೊಬ್ಬರನಾ ನಾ ಕಾಣೆ ಮನ್ನಿಸಿ ಸಲಹುವರನಾ ನಿನ್ನವನೊ ನಾನು ಅನುದಿನದಲಿ ನಿನ್ನ ನೆನೆದು ನೆನೆದು ಇಂದಿನವರೆಗೆ ನಾ ದಿನಗಳೆದೆನೋ ಅ.ಪ. ಇಷ್ಟುದಿನ ಪಟ್ಟ ಕಷ್ಟವು ಸಾಕೋ ಇಷ್ಟಕೆ ನೀ ದಯಾದೃಷ್ಟಿ ಇಟ್ಟು ಜ್ಞಾನವ ಕೊಡಬೇಕೊ ಕಪಟ ಬುದ್ಧಿಯನಷ್ಟು ಕಳೆದಿಷ್ಟವ ಪೂರೈಸಬೇಕೊ ಬಿಟ್ಟವನಲೊ ್ಲನಾ ಕೊಟ್ಟವರು ಪರಿಕರ ಬಿಟ್ಟವರು ಸರಿ ನಾ ಕಟ್ಟಿಕೊಳ್ವೆ ತವ ಚರಣವ ಕೊರಳಿಗೆ 1 ಅಷ್ಟದಿಕ್ಕುಗಳಿಗೆ ಪರಿಹರಿಸಿಹುದೊ ಇಷ್ಟೆಲ್ಲ ಕೇಳಿ ನಾ ಇಟ್ಟೆ ಮನವನು ತವ ಪಾದದಿ ತಿಳಿದು ಸಂತುಷ್ಟನೆ ಎನ್ನ ಬಿಟ್ಟರೆ ಮುಂದಿನ ಬಟ್ಟೆಯ ಕಾಣದೇ ಕೆಟ್ಟು ನಾ ಮೂರಾಬಟ್ಟೆಯಾಗುವೆನೋ 2 ತವ ಪಾದದಿ ತುಳಿದು ಮೆಟ್ಟಿ ಎನ್ನ ಶಿರ ಥಟ್ಟನೆ ಭೂಮಿಯಲಿ ಕೆಡಹುವುದು ಹುಟ್ಟಿದರೆ ದಯವು ಅಟ್ಟಿ ಅಜ್ಞಾನವ ಕಟ್ಟಿ ಸುಜ್ಞಾನವ ಘಟ್ಟಿ ಭಕುತಿಯನು ಕೊಟ್ಟು ನೀ ಪಾಲಿಸೊ 3
--------------
ಹನುಮೇಶವಿಠಲ