ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮಾತಟ ಹರಿ ವಿಠಲ | ಪೊರೆಯ ಬೇಕಿವಳಾ ಪ ಸಾಮಸನ್ನುತ ಹರಿಯೆ | ನಿಸ್ಸೀಮ ಮಹಿಮಾ ಅ.ಪ. ಗುರು ಕರುಣ ಇವಳಿಗಿದೆ | ಮರಳಿ ಹರಿ ಗುರುಭಕ್ತಿನೆರೆ ವೃದ್ಧಿ ಗೈಸುತಲಿ | ಪೊರೆಯೊ ಇವಳಾ |ಕರುಣನಿಧಿ ನೀನೆಂದು | ಆರು ಮೊರೆಯ ನಿಡುವೆನಾಪರಿ ಪರಿಯಲಿಂದಿವಳ | ಕೈ ಪಿಡಿಯೆ ಹರಿಯೇ 1 ಸಜ್ಜನರ ಸಂಗ ಕೊಡು | ದುರ್ಜನರ ದೂರಿರಿಸುಅರ್ಜುನನ ಸಾರಥಿಯೆ | ಮೂರ್ಜಗಕೆ ಒಡೆಯಾ |ಬೊಜ್ಜೆಯಲಿ ಬ್ರಹ್ಮಾಂಡ | ಸಜ್ಜು ಗೊಳಿಸಿಹ ಹರಿಯೆ |ಅರ್ಜುನಾಗ್ರಜ ವಂದ್ಯ | ಸಜ್ಜನರ ಪಾಲಾ 2 ತರತಮದ ಸುಜ್ಞಾನ | ಹರಿಯ ಸರ್ವೋತ್ತಮತೆಕರುಣಿಸೋ ಇವಳೀಗೆ | ಪರಮ ಪಾವನ್ನಾ |ಗರುಡ ಗಮನನೆ ಗುರೂ | ಗೋವಿಂದ ವಿಠ್ಠಲನೆಮೊರೆಯ ಲಾಲಿಸಿ ಇವಳ | ಪೊರೆಯೊ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು