ನಂಬಿದೆನೊ ರಂಗ
ಗೋವಿಂದ ರಂಗ ಪ.
ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ
ನೀನಾದ್ಯಯ್ಯ ರಂಗ 1
ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ
ಮುರಹರನೆ ರಂಗ 2
ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ
ಭುಜಗೇಂದ್ರಶಯನ ಶ್ರೀರಂಗ 3
ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ
ಕಡೆಹಾಯಿಸೊ ರಂಗ 4
ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ
ಮಹಿಮ ಶ್ರೀರಂಗ 5
ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ
ಸಲಹಯ್ಯ ರಂಗ 6