ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನಾಗಿ ದೊರಕುವುದು ಹರಿದರುಶನ ಪ ಶ್ರೀನಾಥವಿಠಲನಲಿ ದೃಢಭಕ್ತಿವುಳ್ಳವಗೆ ಅ.ಪ ಅರುಣೀಯದೊಳೆದ್ದು ಹರಿಕೃಷ್ಣ ಎನುವವಗೆ ಹರಿಹರಿ ಹರಿ ಎಂದು ಸ್ನಾನಗೈವವಗೆ ಹರಿಯ ದ್ವಾದಶನಾಮ ಪಠಣೆಯಿಂಮಣಿವವಗೆ ಗರುಡವಾಹನ ಕೃಷ್ಣ ಗೋಪಾಲಯೆನುವವಗೆ1 ನಿತ್ಯಕರ್ಮವಗೈದು ಫಲವ ಬಯಸದ ಕತ್ರ್ಯವ್ಯಗಳ ಗೈದು ಫಲ ಕೃಷ್ಣಗರ್ಪಿಪ ನರಗೆ ಉತ್ಸಾಹದಿಂದ ಅಭ್ಯಾಗತರ ಪೂಜಿಪಗೆ ಸತ್ಯದೈವವು ಎಂದು ಗೋಸೇವೆ ಗೈವವಗೆ 2 ಕುಳಿತು ನಿಲುವೆಡೆಗಳೊಳು ಹರಿಕೃಷ್ಣ ಎನುವವಗೆ ಇಳೆಯೊಳಿಹ ನರರೆಲ್ಲ ಭ್ರಾತರೆಂದವಗೆ ಉಳಿವು ಅಳಿವುಗಳೆಲ್ಲ ಹರಿಕರುಣವೆಂಬವಗೆ ಜಲಜನಾಭನ ದಿವ್ಯ ನಾಮಗಳ ಭಜಿಸುವಗೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್