ನೀ ಮುನಿದು ಇಳೆಯೊಳಗೇ|
ಸುರಮುನಿ ಜನಪಾಲನ ಮನದಲಿ ಬಂದದಿ
ನೆರೆಯದೇ ಸಾರುವದೀಗ ಪ
ನಿನ್ನಯ ಒಪ್ಪುವ ಮಾರ್ಗವ ನೋಡುತ|
ಮುಚ್ಚನು ಕುಡಿಗಂಗಳ ಯವಿಯಾ|
ಪನ್ನಗವೇಣೀ ನಿನ್ನವಿಯೋಗ ದುಗುಡದೀ|
ಕುಳಿತನುಡಗಿ ಅವಯವ ಸೋಹ್ಯಾ 1
ನಿನ್ನ ಕಾಣುವೆ ನೆಂಬಂಥ ವಾಣಿಯಲೆದ್ದು ಲಜ್ಜಿಸಿ
ಹಿಂದಕ ಕಾಲೆಳೆದಾ|
ಘನ್ನ ವಿರಹ ತಾಪದ ದೆಶೆಯಿಂದಲಿ ಕಿಡಿ ಕಿಡಿ
ಜ್ವಾಲಾಂಗನು ಆದಾ 2
ಕಪಟದಿ ಬಂದು ನೋಡುವೆ ನಿನ್ನೆನುತಲಿ
ಯಾಚಕ ರೂಪತಾಳಿದನು|
ವಿಪುಳಾಂಗ ತಾಳಲಾದರದೇ ನಿನ್ನ ಕುವರಿಯ
ತೊರೆಂದೆ ಚಂದನು ಶರಧಿಯನು3
ದಿನದೊಳಗರಗಳಗಿ ಗಮಿಸದು
ಯನುತಲಿ ವನದೋಳು ಪೋಗಿ
ಹೊತ್ತುಗಳೆವಾ|ಮನಿ ಮನಿ ಪೊಕ್ಕು
ಗೋಕುಲದಲಿ ನಿನ್ನನು
ಅರಸುತಿಹನು ಪಾವನ ದೇವಾ4
ಕ್ಷತ್ರೀಯರು ನಿಷ್ಠುರರೆಂದು ನಿನ್ನಮ್ಯಾಲಿನ
ಕೋಪದಿ ಕಂಡ ವೃತವಳದಾ|
ಅತಿತವನೋಡದೇ ತಾನಾಗಿ ಬಂದನು
ಹಯವೇ ನೋಡೆ ಜೀವನ ಜಗದಾ 5
ಕುವಲಯ ಲೋಚನೆ ಕೂಡಿದ ನಿಮ್ಮಿರ್ವರ
ಹಾಸ್ಯದ ಮುಖವನು|
ಜವದೀ ಅವನಿಲಿ ಕಂಡೆನು ಧನ್ಯಧನ್ಯಾದೆನು
ಮಹಿಪತಿ ಸುತ ಪ್ರಭುವಿನ ದಯದೀ6