ಅಂಕಿತ ರಹಿತ ಹಾಡುಗಳು
ತುಳಸಿಯ ವೃಕ್ಷಗಳ ದಳದಳಗಳ ಮೇಲೆನೆಲಸಿಹನು ಹರಿಯು ಮುದದಿಂದಮುದದಿ ತುಲಸಿಯ ಪೂಜೆಗಳಮಾಡಬೇಕು ಸುಜನರು 1
ತುಲಸಿಯ ಮೂಲದೆ ನದಿಗಳುತುಲಸಿಯ ದಳದೊಳೆ ಶ್ರೀಹರಿಯುತುಲಸಿಯ ಶಾಖೆಯೊಳೆ ಸುರರೆಲ್ಲಾನೆಲೆಸಿಹರು ಶ್ರೀತುಲಸಿಯಮಹಿಮೆಗೆಣೆಯುಂಟೆ 2
ವೃಂದಾವನ ತುಲಸಿಗೆಒಂದು ಪ್ರದಕ್ಷಿಣವಚಂದದಿ ರಚಿಸಿದವರಿಗೆಭೂಮಿಯ ಸುತ್ತಿ ಬಂದಂಥಾಪುಣ್ಯ ದೊರೆವುದು 3
ಜಲದೊಳು ಶೋಧಿಸಿದತುಲಸಿ ದಳವನೆ ಹಾಕಿಆ ಜಲವನು ಶಿರದಿ ತಳಿದರೆತಳಿದರೆ ಗಂಗಾದಿಸಲಿಲದಿ ಮಿಂದ ಸುಫಲವು4
ಭೌಮ ಭಾರ್ಗವ ವಾರದಿಶ್ರೀ ಮಹಾಲಕ್ಷುಮಿಯುನೇಮದಿ ತುಲಸಿ ವನದೊಳುವನದೊಳಗಿರುವಳು ಧೀಮಂತರುಕೊಯ್ಯರದರಿಂದ 5
ಇಳೆಯೊಳಗುಳ್ಳಂಥಾಹಲವು ತೀರ್ಥಗಳಿಹವುತುಲಸಿಯ ಮೂಲದೆಡೆಯಲಿಎಡೆಯಲಿ ತನ್ಮøತ್ತಿಕೆಯತಳೆವುದು ಬಲ್ಲ ಸುಜನರು 6
ಅರುಣೋದಯದಲೆದ್ದುಸಿರಿ ತುಲಸಿಯ ದರುಶನವವಿರಚಿಪುದು ಬಲ್ಲ ಸುಜನರುಸುಜನರು ಪಾತಕಹರಿವುದು ಹರಿಯ ಕೃಪೆಯಿಂದಾ 7
ಸಾರಿಸಿ ರಂಗವಲಿಯನೇರಗೈದಿಕ್ಕಿದನಾರಿಯರಿಗೈದೆತನವನುತನವನು ವೃಂದಾವನಶ್ರೀರಮಣಿಯಿತ್ತು ಪೊರೆವಳು 8
ಮುತ್ತೈದೆತನವನುಪುತ್ರಸಂತಾನವನಿತ್ಯ ಸೇವೆಯನು ರಚಿಸಲುರಚಿಸಲು ತುಲಸೀದೇವಿಇತ್ತು ರಕ್ಷಿಪಳು ಕೃಪೆಯಿಂದಾ9