ಲಕ್ಷ್ಮಿ ರಮಣಗೆ ಮಾಡಿದಳು ಉರುಟಾಣಿÉ ಪ.
ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ಅ.ಪ.
ಕಚ್ಛಪ ಕಿರನೆ ಕೇಸರಿಯಂದದ ಮುಖನೆ
ಸ್ವಚ್ಛಮುಖವ ತೋರೈ ಅರಿಸಿನ ಹಚ್ಚುವೆನು 1
ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ
ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು 2
ದಶರಥsÀನಲಿ ಜನಿಸಿ ದಶಮುಖನ ಸಂಹರಿಸಿ
ಕುಸುಮ ಮುಡಿಸುವೆನು 3
ಹರಿನಾರು ಸಾಸಿರ ಸುದತಿಯರನಾಳಿದನೆ
ಪದುಮಕರವ ತೋರೈ ವೀಳ್ಯವ ಕೊಡುವೆನು 4
ವಸನರಹಿತನಾಗಿ ವಸುಧೆಯ ತಿರುಗಿದೆ
ಬಿಸಜನಾಭನೆ ನಿನಗೆ [ವಸನ ಉಡಿಸುವೆನು] 5
ವರ ತುರಗವನೇರಿ ಕಲಿಯ ಸಂಹರಿಸುವಿ
ಸಿರಿಹಯವದನನೆ ಆರತಿಯೆತ್ತುವೆನು 6