ಕರೆದೆಡೆಗೆ ತಾ ಬರುವ ಕರೆದೆಡೆಗೆ ತಾ ಬರುವ ಪ
ಬರುವೆ ತರುವ ಸುಖವ ಮುರುಳೀಧರನು ಅ.ಪ
ತಿಳಿಯ ಭಕುತಿಯ ಪಡೆದ ಜನರಿಗೆ
ಗೆಳೆಯನಿವ ಬಲು ಸುಲಭನು
ಇಳೆಯಸುರರಾದರದಿ ಕರೆಯಲು
ಹರುಷದಲಿ ನಲಿನಲಿಯುತಲಿ 1
ಸದನದಲಿ ಹದನಿಲ್ಲ ಈತನಿ
ಗೊದಗಿಸುವುದತಿ ಸಾಹಸ
ವಿಧಿಯ ಬರಹವು ಇಲ್ಲವೆನುತಲಿ
ಹೆದರದಿರಿ ಮಧುಸೂಧನನು 2
ಇದು ನನದು ಇದು ನನದು ಎನುವ
ಮದದ ವಚನಕೆ ನಗುತಲಿ
ಇದು ನಿನದು ಎನ್ನಲು ಪ್ರಸನ್ನನು
ವಿದುರನಾಲಯ ಪೊಕ್ಕಿಹ3