ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದೆನೊ ಭವದೊಳಗೆ | ಗೋಪಾಲ | ಇಂದು ನೀ ಕಾಯಬೇಕು | ಗೋಪಾಲ ಪ ಸಿಂಧುಶಯನಯನ್ನ | ಕುಂದುಗಳೆಣಿಸದೆ | ಬಂದು ನೀ ಸಲಹಬೇಕೋ | ಗೋಪಾಲಅ.ಪ ನಾನಾಜನುಮದಿ | ನಾನಾರೂಪವ | ನಾನೆನಿತಾಂತೆನೋ | ಮಾನನಿಧೇ || ಹೀನಜನರ ಕೂಡಿ | ನಾನರಿಯದೆ ನಿನ್ನ | ಶ್ವಾನನಂತಾದೆನಲ್ಲೋ | ಗೋಪಾಲ 1 ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ | ಇಳೆಯಭೋಗಕೆ | ಮನವೆಳೆದಿತೊಪ್ರಾಯ || ಕಾಯ | ಬಳಲುವೆನಿಳೆಯೊಳಗೆ | ಗೋಪಾಲ 2 ಸಿರಿಯತನದಿ ನಾ | ಮರೆಯುತ ನಿನ್ನನು | ಪರಿಪರಿವಿಭವದಿ | ಮೆರೆದೆನೊ ಜೀಯ || ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ | ಪೊರೆಯುವರಾರಿಹರೋ | ಕೃಪಾಳೋ 3 ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ | ಉನ್ನತಮಹಿಮನೆ | ಘನ್ನಸಂಪನ್ನ || ಮುನ್ನಮಾಡಿದ | ಪರಾಧಗಳೆಣಿಸದೆ | ಮನ್ನಿಪರಾರಿಹರೋ | ಮುರಾರೆ4 ಆಶಪಾಶಂಗಳು | ಬೀಸಿದ ಬಲೆಯೊಳು | ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ || ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ | ದಾಸನೆಂದೆನಿಸೊ ನಿನ್ನಾ | ಗೋಪಾಲ 5
--------------
ಶ್ರೀಶ ಕೇಶವದಾಸರು