ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೈಯದವನಿಗಿಂತಲೂ ಬೈಯುವವನೇ ಮೇಲು ಹೊಯ್ಯದವಗಿಂತಲೂ ಹೊಯ್ಯುವವನೆ ಮೇಲು ಪ ಬಾಯೆನಲು ಬರಲೊಲ್ಲೆ ಮಾಯಾಕಾರ ನಿನ್ನಅ.ಪ ಒಬ್ಬ ಧರಣಿಯನೊಯ್ದ ಒಬ್ಬ ಖಡ್ಗವ ಹಿಡಿದ ಒಬ್ಬ ಧರಣಿಯನೆ ಕದ್ದ ಒಬ್ಬ ಬೈದಾ ಉಬ್ಬಿ ನೀ ಸಂತಸದಿ ಅಬ್ಬರಿಸಿ ಪರಿದೈದೆ ಒಬ್ಬೊಬ್ಬರಿಗೂ ದಿವ್ಯ ದರ್ಶನವನು 1 ಜಾರನೆಂದರು ಕೆಲರು ಚೋರನೆಂದರು ಕೆಲರು ಪೋರನಿವನೆಂದರು ನಾರಿಯರು ಪಲರು ಆರೇನ ಬೈದರೂ ದೂರಿ ನಿಂದಿಸಿದರೂ ಸ್ಮರಿಸಿದಾ ನಿಮಿಷಾರ್ಧ ಹರಿ ನಿನ್ನ ಭಕ್ತರ 2 ಇರಬಹುದು ಹಸಿವು ಬಾಯಾರಿಕೆಗಳಿಂದ ಅರಿವು ನಿದ್ರಾ ನೀರಡಿಕೆಗಳ ತೊರೆದು ಅರಸುವಾ ಸಮಯದಲಿ ಬರುವೆ ನೀನದರಿಂದ 3 ಇಳೆಯನೇ ತೆತ್ತವನ ತುಳಿದು ಕೈಸೆರೆ [ಮಾಡ್ದೆ] ಹಳಿದು ನಿಂದಿಸಿದವನ ಬಳಿಗೆ ಹೋದೆ ಮುಳಿಸಿನಿಂದೊದ್ದವನ ಕಾಲುಗಳ ನೀತೊಳೆದೆ ಹಳಿವು ಬೈಗಳು ನಿನಗೆ ಹಿತವು ಮಾಂಗಿರಿಯ ರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್