ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ಪ
ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿ |ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ಧ್ವನಿಗೆ ||ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣಿಗಾರನೆ ಅ .ಪ.
ಬೊಮ್ಮ ಭಾರ ಬೆನ್ನಿಲಿಕೋರೆ ದಾಡೆಯ ನಾರಸಿಂಹನೆ |ಧರೆಯ ಬೇಡಿದ ಧೀರ ಪುರುಷನೆವಾರಿ ಬಂಧನ ಮಾರಜನಕನೆ ||ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ 1
ಅಖಿಳ ಭೂಮಿಯ ತಂದ ನರಹರಿ |ಯುಕುತಿಯಲಿ ನೆಲನಳೆದ ಭಾರ್ಗವಮುಕುತಿಗೋಸುಗ ಫಲವ ಸವಿದನೆ ||ರುಕುಮನನುಜೆಯ ರಮಣ ಬೌದ್ಧನೆಲಕುಮಿ ರಮಣನೆ ಕಲ್ಕಿರೂಪಿಯೆ 2
ಬನ್ನ ಬಡುಕನೆ ||ಹೆಣ್ಣುಗಳ ವ್ರತ ಕೆಡಿಸಿ ತೇಜಿಯಬೆನ್ನನೇರಿದ ವ್ಯಾಸ ವಿಠ್ಠಲ* 3