ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಶಿಲೆಯಲ್ಲಿ ಮಮತೆಯೇ ಸಿದ್ಧ ಪುರುಷ ಇಳೆಮೂರು ವ್ಯಾಪಕಗೆ ಈ ಮುನಿಯ ಬಳಿಯಾ ಪ. ದಶರಥಾತ್ಮಜ ಸೇತು ಬಂಧನವ ಗೈಯಲೂ ಅಸಮ ಸಾಹಸದಿ ಗಿರಿಗಳನೆ ತಂದೇ ಹಸನಾದ ಶಿಲೆಯೊಂದರಲಿ ರೂಪ ಮೂಡುವಡೆ ವಸುಧಿ ಸುತೆಪತಿ ಬೇಡವೆನುತಿರ್ದನೇನೈ 1 ನಡುಗೆ ಹುಲಿ ಘರ್ಜನೆಗೆ ಪಡೆದವಳ ಕೈ ಜಾರೆ ವಡೆದು ಶತವಾಗಲಾ ಗಿರಿಯಲ್ಲಿ ಮಮತೇ ವಡಮೂಡದವಗೆ ಈ ವಡೆದ ಪ್ರತೀಕದಲಿ ಇಡುತ ಅಭಿಮಾನವನು ಕಡು ಪೂಜೆಗೊಂಬೇ 2 ಧರೆಯಲ್ಲಿ ಚರಿಸಿ ಸದ್ಭಕ್ತರ ಜ್ಞಾನವನು ಹರಿಸಿ ಸಧ್ಗ್ರಂಥ ಕನ್ನಡಿಯ ತೋರಿ ಗಿರಿ ಏರುವಾಗ ಬೇಕೆನಲು ಶಿಲೆ ಇರಲಿಲ್ಲೆ ಬಿರುಕಾದ ಕಲ್ಲಿನಲ್ಲಿ ನೆಲಸಿರುವದೇನೈ 3 ಶಿಲೆಯೆ ನೀನೆನ್ನಲು ಅಜ್ಞಾನಿ ನುಡಿಯಹುದು ಶಿಲೆಯಲ್ಲಿ ನೀನೆಲು ಮತ್ತೊಂದು ಶಿಗದೇ ಬಲು ಛಿದ್ರ ತಂತಿಯಲಿ ಬಿಗಿಸಿ ಪೂಜೆಯಗೊಂಬ ಬಲವಂತದಾ ಮಹಿಮೆ ತಿಳಿಯಲಳವಲ್ಲಾ 4 ತಾಪಸರ ಪೂಜೆ ಸತ್ವವ ತೋರ್ವ ವೈಭವವೋ ಆಪನ್ನರನೆ ಕಾಯ್ವ ಆನಂದವೋ ಶ್ರೀ ಪರಮಹಂಸ ಪ್ರದ್ಯುಮ್ನತೀರ್ಥರಿಗೊಲಿದೆ ಗೋಪಾಲಕೃಷ್ಣವಿಠ್ಠಲನ ನಿಜದಾಸ 5
--------------
ಅಂಬಾಬಾಯಿ
ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು ಶಾಪವೊದಗಲು ಅಂಬರೀಷನ್ವರದೆನಲೋ ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು ಆಪಾರ ಕಷ್ಟದಲಿ ಕರಿವರದೆನೆನಲೋ 1 ಮಾತೃ ವೈರ್ಯಾದರೆ ಧ್ರುವಪಾಲನೆನಲೋ ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು ಖಾತ್ರಿಯಿಂ ಸತತದಿ ಸೂತ್ರಧಾರೆನಲೋ 2 ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು ದುರುಳರ್ಹಾವಳಿಯೊಳಗೆ ದನುಜಹರನೆನಲೋ 3 ಕವಿಯಲು ವೈರಿಗಳು ಕಂಸಮರ್ದನನೆನ್ನು ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು ಭವಿಜನುಮ ಬಂದಿರಲು ಭವರೋಗಹರನೆನ್ನು ದಿವನಿಶೆಯು ಎಡೆಬಿಡದೆ ಭಯದೂರನೆನಲೋ 4 ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು ಕುಲಭ್ರಷ್ಟನಾದರಜಮಿಳನ್ವರದನೆನಲೋ ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ 5
--------------
ರಾಮದಾಸರು
ನಾನಿನ್ನ ಧ್ಯಾಸದೊಳಿರುವೆ ಹರಿ ನೀನೆನ್ನ ಧ್ಯಾಸದೊಳಿರಬೇಕು ಸತತ ಪ ಬೆಳಗು ನಿನ್ನೊಳಗಯ್ಯ ಬೆಳಗಿನೊಳಗೆ ನೀನು ಕಳೆಯೊಳಗೆ ನೀನಯ್ಯ ಕಳೆಯು ನಿನ್ನೊಳಗೆ ಇಳೆಮೂರು ನಿನ್ನೊಳಗೆ ಇಳೆಯೊಳು ನೀನಯ್ಯ ಒಲಿದು ನೀ ಎನ್ನನು ಸಲಹಯ್ಯ ಸತತ 1 ವೇದದೊಳಗೆ ನೀನು ವೇದ ನಿನ್ನೊಳಗಯ್ಯ ನಾದ ನಿನ್ನೊಳು ದೇವ ನಾದದಿ ನೀನು ಬೋಧ ನಿನ್ನೊಳು ಪ್ರಭು ಮಾಧವ ಸತತ 2 ನೀನಿಟ್ಟ ಸೂತ್ರದಿಂ ನಾನಾ ಸೃಷ್ಟಿಗಳೆಲ್ಲ ನಾನುತಾನೆನ್ನುತ ಕುಣೀತಿಹ್ಯವೊ ನಾನು ನಿನ್ನೊಳು ಜೀಯಾ ನೀನು ನಿನ್ನೊಳು ತಂದೆ ಧ್ಯಾನದಾಯಕ ಶ್ರೀರಾಮಯ್ಯ ಸತತ 3
--------------
ರಾಮದಾಸರು