(ಬಪ್ಪನಾಡ ದುರ್ಗಾಪರಮೇಶ್ವರಿ)
ಬಪ್ಪನಾಡ ಭದ್ರಕಾಳಿ ತಪ್ಪು ಕ್ಷಮಿಸಿ ಸಲಹಮ್ಮ ನ-
ಮ್ಮಪ್ಪ ಶ್ರೀನಿವಾಸ ದೇವನಪ್ಪುತಾನಂದಾಬ್ಧಿಗಿಳಿದ ಪ.
ಸರಸಿಜಾಸನಾದಿ ದೇವ ವರರ ನೀನೆ ಸಲಹುವಿ
ದುರುಳ ಜನರ ತರಿದು ಭೂಮಿ ಭರವನೆಲ್ಲ ಇಳುಹುವಿ
ಚರಿಯ ತೋರ್ಪಮಾಯೆ ಅಲ್ಯ-
ಲ್ಲಿರುವ ಶತ್ರು ಪುಂಜವ ಕತ್ತರಿಪದೇನಾಶ್ಚರ್ಯ ತಾಯೆ 1
ಶಂಬರಾರಿ ಪಿತನಪಾದ ನಂಬಿಕೊಂಡ ರಾತಿಯ
ಅಂಬೆ ನಿನ್ನ ಕರುಣದಿಂದ ಸಂಭವಿಸಿದ ಖ್ಯಾತಿಯ
ಡಂಬತನದ ಶುಂಭ ನೀಶುಂಭ ದಮನೆ ಶಕ್ತಿ ನಿನ-
ಗೆಂಬುದೇನು ದಾಸದಾಸನೆಂಬದರಿತು ಸಲಹು ದೇವಿ 2
ಮೂಢಮತದಿ ಮುಂದೆ ಹೋಗಿ ಮಾಡಿದಂಥ ಕುಂದನು ಪ್ರ-
ಹುಡೆ ಕ್ಷಮಿಸಬೇಕೆಂದಿಂದು ಓಡಿ ಬಂದು ನಿಂದೆನು
ಮೂಡಲಾದ್ರಿವಾಸನಡಿಯ ಪಾಡುವನೆಂದೆನ್ನನು ಕಾ-
ಪಾಡಿ ಕಡೆಹಾಯಿಸುವದೆಂದು ಬೇಡಿಕೊಂಬೆ ಭಯಹರಾಂಬೆ 3