ವೇದತತಿಗಳ ಕದ್ದೊಯ್ದವನ ಕೊಂದು ಪ್ರಳ
ಯೋದಧಿಯೊಳಗೆ ಚರಿಸಿ | ಚರಿಸಿ ವೈವಸ್ವತನ
ಕಾಯ್ದ ಮಹಾಮಹಿಮ ದಯವಾಗೊ 1
221ಮಂದರಾದ್ರಿಯ ಧರಿಸಿ ಸಿಂಧುಮಥನವ ಮಾಡಿ
ಬೃಂದಾರಕರಿಗೆ ಅಮೃತವ | ಅಮೃತವನುಣಿಸಿದ
ಇಂದಿರಾರಾಧ್ಯ ದಯವಾಗೊ 2
222 ಸೋಮಪನ ನುಡಿಕೇಳಿ ಹೇಮಾಂಬಕನ ಕೊಂದಿ
ಭೂಮಿಯಾ ನೆಗಹಿದ ದಾಡಿಂದ | ದಾಡಿಂದ ನೆಗಹಿದ
ಸ್ವಾಮಿ ಭೂವರಹ ದಯವಾಗೊ 3
223 ಕಂದ ಕರೆಯಲು ಕಂಬದಿಂದುದಿಸಿ ರಕ್ಷಿಸಿದಿ
ವಂದಿಸಿದ ಸುರರ ಸಲಹೀದಿ | ಸಲಹೀದಿ ನರಸಿಂಹ
ತಂದೆ ನೀನೆಮಗೆ ದಯವಾಗೊ 4
224ವೈರೋಚನಿಯ ಭೂಮಿ ಮೂರುಪಾದವ ಬೇಡಿ
ಭೂ ವ್ಯೋಮವಳೆದೆ ಭಾ
ಗೀರಥಿಯ ಜನಕÉ ದಯವಾಗೊ 5
225 ಕುವಲಯಾಧೀಶ್ವರರ ಬವರ ಮುಖದಲಿ ಕೊಂದೆ
ಅವನಿಭಾರವ ನೀನುಳುಹಿದ | ಇಳುಹಿದಾ ಸ್ವಾಮಿ ಭಾ
ರ್ಗವರಾಮ ಎಮಗೆ ದಯವಾಗೊ 6
226 ಶತಧೃತಿಯ ನುಡಿಗೆ ದಶರಥನ ಗರ್ಭದಿ ಬಂದು
ದಿತಿಜರನು ಸವರಿ ಸುಜನರ | ಸುಜನರ ಪೊರೆದ ರಘು
ಪತಿ ಎನಗೆ ದಯವಾಗೊ 7
227 ವಸುದೇವ ದೇವಕೀ ಬಸುರೀಲಿ ಜನಿಸಿದ
ವಸುಧೆ ಭಾರವನು ಇಳುಹಿದಿ | ಇಳುಹಿ ಪಾಂಡವರ ಕ
ವಿಸಿದ ಶ್ರೀಕೃಷ್ಣ ದಯವಾಗೊ 8
228 ಜಿನನೆಂಬ ದನುಜ ಸಜ್ಜನ ಕರ್ಮವ ಮಾಡೆ
ಜನಿಸಿ ಅವರಲ್ಲಿ ದುರ್ಬುದ್ಧಿ | ದುರ್ಬುದ್ಧಿ ಕವಿಸಿದ
ವಿನುತ ಬುದ್ಧ ದಯವಾಗೊ 9
229 ಕಲಿ ವ್ಯಾಪಾರ ವೆಗ್ಗಳವಾಗೆ ತಿಳಿದು ಶಂ
ಫಲಿ ಎಂಬ ಪುರದಿ ದ್ವಿಜನಲ್ಲಿ | ದ್ವಿಜನÀಲ್ಲಿ ಜನಿಸುವ
ಕಲಿಮಲವ ಹರಿಸುವ ಕಲ್ಕಿ ದಯವಾಗೊ 10
230 ಧಾರುಣಿಯಲ್ಲಿ ಹತ್ತವತಾರದಲಿ ಸುಜ
ನರ ರಕ್ಷಿಸಿದೆ ಜಗನ್ನಾಥ | ಜಗನ್ನಾಥವಿಠಲ ಮ
ವೈರಿ 11