ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವಖಂಡದ ಸ್ವಾಮಿ ಒಂದು ನಮ್ಮಗೆಲಿಸಲಿಶುಕಬುದ್ಧಿ ಬಾಲೆಯರ ಕುಂದುಗೈಸಲಿ ಪ. ಚನ್ನನಚಾರಿವಾಸ ಮನ್ನಾರಿ ಕೃಷ್ಣನ ಸಹಮುನ್ನ ಪ್ರಯಾಗಿ ಮಾಧವನ ಬಲಗೊಂಬೆವು1 ಇಳಾ ವರ್ತಾ ಭದ್ರಶಾಮ ಈತನ ಬಲಗೊಂಬೆವುನಾವು ಈತನ ಬಲಗೊಂಬೆವು ಅವರು ನಮ್ಮ ಪಂಥ ಗೆಲಿಸೆಂಬೆವು2 ಹರಿ ವರುಷ ಕಿಂಪುರುಷ ಭರತ ಖಂಡದಲ್ಲಿದ್ದಭರತ ಖಂಡದಲ್ಲಿದ್ದ ನರಹರಿಯ ಬಲಗೊಂಬೆ ಪಂಥಗೆಲಿಸುವ ಶುದ್ಧ 3 ಕೇತು ಮೂಲ ಖಂಡದ ಹರಿಯ ಪ್ರೀತಿಲೆ ಬಲಗೊಂಬೆವುಮಾತು ಸೋಲಿಸಿ ಅವರ ನಮ್ಮ ಮಾತುUಲಿಸೆಂಬೆವು 4 ರಮ್ಯಕ್ಕೆ ಹಿರಣ್ಮಯ ಈ ಕುರುಖಂಡವೆಂಬೊಕುರುಖಂಡದಲಿ ರಮಿಸಿ ಅಲ್ಲಿರುವ ರಾಮೇಶನ ಬಲಗೊಂಬೆವು5
--------------
ಗಲಗಲಿಅವ್ವನವರು
ಪರದೇಶಿ ನೀನು ಸ್ವದೇಶಿ ನಾನು ಪ ಪರಮ ಭಾಗವತರ ಬಾ ಹೋಗಿ ಕೇಳೋಣಅ ಎನಗೆ ಜನಕನು ನೀನು ನಿನಗಾವ ಜನಕನೊ ಜನನಿ ಇಂದಿರೆದೇವಿ ನಿನಗಾವಳೊ ವನಜಪೀಠನು ಭ್ರಾತ ನಿನಗಾವ ಭ್ರಾತನೊ ಇನ ಸೋಮ ಮಾತುಳರು ನಿನಗಾವ ಮಾತುಳನೊ 1 ಸುರನದೀ ಅಗ್ರಜಳು ನಿನಗೆ ಅಗ್ರಜಳಾರು ಶರನಿಧಿ ಭಾವ ನಿನಗಾರು ಭಾವ ಸ್ಮರನು ಕಿರಿ ಸಹಭವನು ನಿನಗೆ ಸಹಭವನಾರೊ ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ 2 ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ ಮರುತ ದೇವರು ಗುರು ನಿನಗಾರು ಗುರುವೊ ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ ಚರಣ ಸೇವಕ ನಾನು ನೀನಾರ ಸೇವಕನೊ 3
--------------
ವಿಜಯದಾಸ
ರಾಮ ಭಜನೆ ಮಾಡೋ ಮನುಜ ರಾಮ ಭಜನೆ ಮಾಡೋ ಪ ರಾಮ ರಾಮ ಜಯ ರಾಘವ ಸೀತಾ ರಾಮನೆಂದು ಸುಸ್ವರದಲಿ ಪಾಡುತಅ.ಪ ತಾಳವನು ಬಿಡಬೇಡ ಮೇಳವನು ಮರೆಬೇಡ ತಾಳಮೇಳಗಳ ಬಿಟ್ಟು ನುಡಿದರೆ ತಾಳನು ನಮ್ಮ ಇಳಾಸುತೆಯರಸನು 1 ಭೃತ್ಯ ಮನೋಭಾವದಲಿ ಸತ್ಯ ಜ್ಞಾನ ಅನಂತ ಬ್ರಹ್ಮನು ಹೃದ್ಗತನೆಂದರಿಯುತ ಭಕುತಿಯಲಿ 2 ಭಲರೆ ಭಲರೆಯೆಂದು ತಲೆದೂಗುವ ತೆರದಿ ಕಲಿಯುಗದಿ ವರಕೀರ್ತನೆಯಿಂದಲಿ ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 3
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣನೆನೆಸಿದ ವಿನೋದಿ ಹರಿ ಸರ್ವೋತ್ತಮಗೆ ಸುವ್ವಿಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ಪರಮೇಷ್ಠಿ ಗುರುಗಳಿಗೆ ಶರಣೆಂಬೆ ಸುವ್ವಿ ಪರಮೇಷ್ಠಿ ಗುರುಗಳಿಗೆ ಹರಿ ಪರನೆಂದು ಪೇಳ್ವ ಶ್ರೀಮದಾನಂದತೀರ್ಥರಿಗೆ ಸಾಸೀರ ಶರಣೆಂಬೆ 1 ವಾಸುದೇವ ಪರ ಸಂಕರ್ಷಣ ಅತಿಕ್ರೂರಸಂಹಾರಕಾರ ಸುವ್ವಿ ಸಂಕರ್ಷಣ ಅತಿಕ್ರೂರಸಂಹಾರಕಾರ ಪ್ರದ್ಯುಮ್ನ ಬೊಮ್ಮ ಕುಮಾರನಂತೆ ಸುವ್ವಿ 2 ಸೂಕರ ನರಹರಿ ಕಾಯ ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ3 ಮುಖ್ಯಪ್ರಾಣ ಆವಲ್ಲಿ ನಾರಾಯಣ ಇವರಿಬ್ಬರ ಗುಣವನರಿಯದವನೆ ಸುವ್ವಿ ಇವರಿಬ್ಬರ ಗುಣವ ಅರಿಯದವನೆ ಗೌಣನೆಂಬರ್ಥದಲಿ ಬ್ರಹ್ಮಸೂತ್ರ [ದಂಬಂತೆ] ಸುವ್ವಿ4 ಆತ್ಮನು ಅತಂತ್ರ ಪರಮಾತ್ಮನು ಸ್ವತಂತ್ರ ದುಃ- ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ಸುವ್ವಿ ದುಃ- ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ವಾದಿ ಜ್ಞಾನಾನಂದಕ ಹರಿಗೆ ಸಮರಿಲ್ಲ ಸುವ್ವಿ 5 ಜಡದಲ್ಲಿ ಜೀವಾತ್ಮ ಜಡ ಜೀವರÀಲಿ ಪರಮಾತ್ಮ ಕ್ರೀಡೆಯಿಂದ ಏಕಾತ್ಮ ಬಿಡದಿಹ ಸುವ್ವಿ ಕ್ರೀಡೆಯಿಂದ ಏಕಾತ್ಮ ಬಿಡದಿಹುದು ವಾದಿ ದ್ವಾಸುಪರ್ಣ ವೆಂಬೋ ಶ್ರುತಿ ಲೇಸು ಲೇಸು ಸುವ್ವಿ 6 ಜಡ ಹರಿಗಳ ಭೇದ ಜೀವ ಜೀವಕೆ ಭೇದ ಜೀವೇಶ್ವರಗೆ ಭೇದ ಶರೀರ ಭೇದ ಸುವ್ವಿ ಜಡ ಜೀವರಿಗೆ ಭೇದ ಶರೀರ ಭೇದ [ವೆನ್ನಿ] ಜಡಜೀವ ಭೇದ ಪಂಚಭೇದಗಳು ಸುವ್ವಿ 7 ಪಂಚಭೇದಗಳೆಂಬ ಪ್ರಪಂಚದಲಿ ಸಕಲ ವೈಕುಂಠದೊಳಗಿನ ವಿವರ ಒಂದುಂಟು ಕೇಳು ಸುವ್ವಿ ವೈಕುಂಠÀದೊಳಗಿನ ವಿವರ ಒಂದುಂಟು ಕೇಳು ವಾದಿ ಸಾಕು ಸಾಕು ನಾಲ್ಕುವಿಧ ಮುಕ್ತಿಯುಂಟಲ್ಲಿ ಸುವ್ವಿ 8 ಶ್ರವಣಕೀರ್ತನ ಹರಿಸ್ಮರಣೆ ಸೇವನ ಪೂಜನ ವಂದನ ಹರಿದಾಸ್ಯ ಸಖ್ಯಮಾತ್ಮನಿವೇದನೆ ಸುವ್ವಿ [ಹರಿದಾಸ್ಯ ಸಖ್ಯಮಾತ್ಮ ನಿವೇದನೆಗಳು ತಮ್ಮ] ಅರ್ಥ ಕೂಡೊಂಬತ್ತುಭಕ್ತಿ ಸತ್ಯ ಉಂಟು ಸುವ್ವಿ 9 ಜೀವೇಶ[ನೊಂದು] ಹರಿನಿರ್ಗುಣನೆಂದು ಅಪೂರ್ಣ ಗುಣನೆಂದು ಬ್ರಹ್ಮಾದಿಗಳೊಂದು ಸುವ್ವಿ ಬ್ರಹ್ಮಾದಿಗಳೊಂದು ಸಮರಧಿಕಾರ ಅವತಾರ ಎಲ್ಲ ಒಂದೆ ಎಂಬುವಗೆ ಸುವ್ವಿ 10 ಅವತಾರವೆಲ್ಲ ಅಂಶವತಾರವೆಂದ ಹರಿಭಕ್ತರಲ್ಲಿ ಕೋಪ ಸುವ್ಯಕ್ತವಾಯಿತು ಸುವ್ವಿ ಕೋಪ ಸುವ್ಯಕ್ತವಾಯಿತು ವಾದಿ ಹರಿಭಕ್ತರೊಡನೆ ಕೋಪಂಗಳು ವ್ಯರ್ಥವಾಯಿತು ಸುವ್ವಿ 11 ಪಂಚಮಹಾಭೂತ ದೇಹ ಸಂಚಯರೆಲ್ಲ ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಸುವ್ವಿ ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಮುಕ್ತರ ದೇಹವೆಲ್ಲ ಸುಖದ ಸಂದೋಹವಂತೆ ಸುವ್ವಿ 12 ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಪಿರಿಯವಾದವು[ನೂರೊಂದು] ಐದು ಸುವ್ವಿ ಪಿರಿಯವಾದವು[ನೂರೊಂದು] ಐದು ಮೂರು ಒಂದು ಈ ಪರಿಯಾಗಿ ಇಪ್ಪುವಂತೆ ಸುವ್ವಿ 13 ಇಳಾನಾಡಿ ಸಾವಿರ ಸೀಳುಮಾಡಿ ಅದರೊಳು ಸೀಳುಮಾಡಿದರೇಳು ವಿರಳನಂತೆ ಸುವ್ವಿ ಸೀಳುಮಾಡಿದರೇಳು ವಿರಳನಂತೆ ನಾಡಿಯಲ್ಲಿ ರಕ್ತವರ್ಣನಾಗಿ ನಾರಾಯಣನಿಹ್ಯ ಸುವ್ವಿ 14 ಒಂದುನಾಡೀ ಪೆಸರು ಸುಷುಮ್ನನಾಡಿಯೆಂಬರು ಅದರಂತರ ಕಡೆಯಲಿ ರಂಧ್ರವಂತೆ ಸುವ್ವಿ ಅದರಂತರ ಕಡೆಯಲಿ ರಂಧ್ರÀ್ರವಂತೆ ನಾಡಿಯಲಿ ಕಮಲ ಮಧ್ಯದಲಿ ತಾ ವಿಮಲನಂತೆ ಸುವ್ವಿ 15 ನಾಡಿ ಮೂಲದೊಳು ನಾಲ್ಕುದಳದ ಕಮಲವುಂಟು [ನೀಲ]ವರ್ಣದಿಂದ ಸಂಪೂರ್ಣನಂತೆ ಸುವ್ವಿ [ನೀಲ]ವರ್ಣದಿಂದ ಸಂಪೂರ್ಣ[ನೀಲವರ್ಣ ಅನಿರುದ್ಧ] ನಲ್ಲಿ ತಾ ವಾಸನಂತೆ ಸುವ್ವಿ 16 ಪೊಕ್ಕುಳಲಿ ಆರುದಳ ಇಕ್ಕ್ಕು ರೀತಿಯಿಂದಲೇಳು [ಬಿಂಕನಾದ] ಸಂಕರ್ಷಣ ಮುಖ್ಯನಂತೆ ಸುವ್ವಿ [ಬಿಂಕನಾದ ಸಂಕರ್ಷಣ] ಮುಖ್ಯನಂತೆ ಜೀವಗೆ ಪಿಂಗಳ ವರ್ಣನಾಗಿ ಹಿಂಗದಿಹ ಸುವ್ವಿ 17 ಇಡಾನಾಡಿ [ಉದೀಚಿ] ಪಿಂಗಳ ದಕ್ಷಿಣದಲಿ ಪ್ರತೀಚಿ [ವಜ್ರಿಕೋ ಪೂರ್ವಾ ಅಂತೆ] ಸುವ್ವಿ ಪ್ರತೀಚಿ ವಜ್ರಿಕೋದೀಚಿ ಬ್ರಹ್ಮನಾಡಿ ಸುತ್ತಾ ಪಂಚನಾಡಿಗಳ ಪಂಚರೂಪಗಳೆ ಸುವ್ವಿ 18 ಎಂಟುದಳ ಕೆಂಪು ಉಂಟು ಹೃದಯ ಕಮಲದಲಿ ವೈಕುಂಠಪತಿ ಚತುರನ ಮಂಟಪವೆ ಸುವ್ವಿ ವೈಕುಂಠಪತಿ ಚತುರನ ಮಂಟಪದ ಮಧ್ಯದಲಿ ವಾಯು ಜೀವರಿಗೆ ಸಹಾಯನಂತೆ ಸುವ್ವಿ 19 ಕೂದಲ ಕೊನೆಯ ಹತ್ತು ಸಾವಿರ ವಿಧವನೆಮಾಡಿ ಜೀವ ಪರಿಮಾಣ ಒಂದೆ ಕಂಡ್ಯ ಸುವ್ವಿ ಜೀವ ಪರಿಮಾಣ ಒಂದೆ ಕಂಡ್ಯ ಚತುರನ ಅಂಗುಷ್ಟದÀಷ್ಟು ಜೀವ [ಅಂಶನಂತೆ] ಸುವ್ವಿ 20 ಸ್ಥೂಲಾಂಗುಷ್ಠ ಪರಿಮಾಣ ಪ್ರಾಜ್ಞನಾದ ನಾರಾಯಣ ಹೃದಯಕಮಲದ ಒಳಗೆ ವಿಮಲನಂತೆ ಸುವ್ವಿ ಹೃದಯಕಮಲದ ಒಳಗೆ ವಿಮಲನಂತೆ [ಜೀವಂಗಾ ರೂಪದಲಿ] ಹರಿ ತಾ ರಕ್ಷಿಪನಂತೆ ಸುವ್ವಿ 21 ಹೃದಯಾಕಾಶದಲಿ ಪ್ರಾದೇಶ ಪರಿಮಾಣ ಆದಿ ಪುರುಷನಿಹ್ಯ ಈ ವಿಧವಾಗಿ ಸುವ್ವಿ ಆದಿ ಪುರುಷನಿಹ್ಯ ಈ ವಿಧವಾಗಿ ಜೀವಗೆ ಗೃಹದೋಪಾದಿಯಲಿ ಹರಿ ರಕ್ಷಕನಂತೆ ಸುವ್ವಿ 22 ಕಂಠದೇಶದಲಿ ಉಂಟು ತೈಜಸಮೂರ್ತಿ ಕರ ಹತ್ತೊಂಬತ್ತು ಶಿರಗಳು ಸುವ್ವಿ ಕರ ಹತ್ತೊಂಬತ್ತು ಶಿರಗಳು ಮಧ್ಯದಲ್ಲಿ ಕರಿಮುಖ ಹಸ್ತಿಯಾಗಿಪ್ಪನಂತೆ ಸುವ್ವಿ 23 ಕಿರುನಾಲಗೆಯಲ್ಲಿ ಎರಡುದಳ ಕಮಲ ಅರವಿಂದ ಪದ್ಮದಲಿ ನಾರಾಯಣನಿಹ್ಯ ಸುವ್ವಿ ಅರವಿಂದ ಪದ್ಮದಲಿ ನಾರಾಯಣನಿಹ್ಯ ಹರಿಯು ರೂಪವೆಲ್ಲವಾಗಿ ಇಪ್ಪನಂತೆ ಸುವ್ವಿ 24 ದÀಕ್ಷಿಣಾಕ್ಷಿಯಲಿ ಲಕ್ಷಣ ವಿಶ್ವಮೂರ್ತಿ ಶಿಕ್ಷಕನಾಗಿ ಜೀವರ ವಂಶರಕ್ಷಕನಂತೆ ಸುವ್ವಿ ಜೀವರ ವಂಶರಕ್ಷಕನನ್ನೆ [ಜಾಗರವ ಕಾಣಿಸೋನಷ್ಟೆ] ವಾಣಿ ನಿಪುಣನಂತೆ ಸುವ್ವಿ 25 ಈ ದೇವರು ಪ್ರಾಜ್ಞನಾದ ಹರಿಯ ಕೂಡಿ ನಿದಾನಿಸಲು ಜೀವಂಗೆ ಸುಖತೇಜಸವು ಸುವ್ವಿ ನಿದಾನಿಸಲು ಜೀವಂಗೆ ಸುಖತೇಜಸವು ಅನೇಕಾಗಿ ತೈಜಸನಲ್ಲಿ ಸ್ವಪ್ನಭಾಗ್ಯ ಸುವ್ವಿ 26 ಹುಬ್ಬುಗಳ ಮಧ್ಯದಲಿ ಶುಭ್ರ ನಾಲ್ಕುದಳ ಕಮಲ ಅನಿರುದ್ಧ ನೀಲಾಭ್ರವರ್ಣ ಸುವ್ವಿ ಅನಿರುದ್ಧ ನೀಲಾಭ್ರವರ್ಣನಾಗಿ ಹರಿ ಅಲ್ಲಿ ಅದೃಶ್ಯವಾಗಿರುವನಂತೆ ಸುವ್ವಿ 27 ಶಿರದಲ್ಲಿ ಶುಭ್ರ ಹನ್ನೆರಡುದಳ ಕಮಲ ಅರುಣವರ್ಣನಾದ ನಾರಾಯಣನಿಹ್ಯ ಸುವ್ವಿ ಅರುಣವರ್ಣನಾದ ನಾರಾಯಣನಿಹ್ಯ ಹರಿಯು ಈ ಪರಿಯಲಿ ತಿಳಿದವರಧಿಕರಂತೆ ಸುವ್ವಿ 28 ಬ್ರಹ್ಮಹತ್ಯ ಶಿರಸ್ಕಂಚ ಸ್ವರ್ಣಸ್ತೇಯ ಭುಜದ್ವಯಂ ಸುರಾಪಾನ ಹೃದಾಯುಕ್ತಂ ಗುರುತಲ್ಪ ಸುವ್ವಿ ಸುರಾಪಾನ ಹೃದಾಯುಕ್ತಂ ಗುರುತಲ್ಪ ಕಟಿದ್ವಯಂ ಪಾದ ಪಾಪರೂಪಗಳೆ ಸುವ್ವಿ29 ಪಾತಕ ಪ್ರತ್ಯಂಗಗಳು ಉಪಪಾತಕ ರೋಮಂಗಳು ಪಾಪಪುರುಷ ರಕ್ತನೇತ್ರ ನೀಲಪುರುಷ ಸುವ್ವಿ ಪಾಪಪುರುಷ ರಕ್ತನೇತ್ರ ನೀಲಪುರುಷನಾಗಿ ವಾಸ ವಾಮಕುಕ್ಷಿಯಲಿ ನ್ಯಾಸವಂತೆ ಸುವ್ವಿ 30 ಪುರುಷ ಷೋಡಶನಾದ ಷಟ್ಕೋಣದಲ್ಲಿ ಪ್ರದ್ಯುಮ್ನನಿಹ್ಯ ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ಸುವ್ವಿ ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ದೇಹ ಪವಿತ್ರ [ವಾಸುದೇವರಲ್ಲಿ ಸುವ್ವಿ]31 ಹನ್ನೆರಡಂಗುಲಮೇಲೆ ಹನ್ನೆರಡುದಳ ಕಮಲ [ಪ್ರಪÀನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ಸುವ್ವಿ [ಪ್ರಪÀನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ತುರಿಯ ಸಿತದಳದಲ್ಲಿ ನಿಧಾನಿಸಲು ಸುವ್ವಿ 32 ಮುಖ್ಯಪ್ರಾಣನೆಂಬೊ ಗುರುವು ಹರಿಗೆ ಸಖ್ಯನಾದ ಬಂದ ದುಃಖ ಪರಿಹರಿಸಿ ಸುಖಬಡಿಸುವ ಸುವ್ವಿ ಬಂದ ದುಃಖ ಪರಿಹರಿಸಿ ಸುಖಬಡಿಸುವ ಮಾರುತನು ಹನುಮ ಭೀಮಸೇನ ರೂಪಗಳು ಸುವ್ವಿ 33 ಮೂರನೆ ಅವತಾರ ಆನಂದತೀರ್ಥರು ವೀರವೈಷ್ಣವರಿಗೆ ಆದಿಗುರುಗಳು ಸುವ್ವಿ ಪಾದ ನೆನೆದರೆ ಘೋರ ಸಂಸಾರವನು ನೀಗಿಸುವನು ಸುವ್ವಿ 34 ಘೋರ ಸಂಸಾರವನು ನೀಗಿಸುವ ಹಯವದನ ತನ್ನ ಪಾದದ ಸಮೀಪದಲಿಟ್ಟು ಸಲಹುವ ಸುವ್ವಿ ಪಾದದ ಸಮೀಪದಲಿಟ್ಟು ಸಲಹುವ ಹಯವದನ ಖೇದಗಳ ಬಿಡಿಸಿ ರಕ್ಷಿಸುವ ಸುವ್ವಿ 35
--------------
ವಾದಿರಾಜ