ಬಾರೋ ಬಾರೋ ಗುರುರಾಯನೆ ಧ್ರುವ
ಹೊಳೆಯನೀಸಿ ಇಳದಿ ಬಾರೊ
ಇಳಿಯ ಪೊತ್ತು ಬಳಿದಿ ಬಾರೊ
ಇಳಿಯಗೆಲಿದು ಸೀಳಿ ಕಂಭದೊಳು
ಹೊಳದಿ ಬಾರೊ ನೀನು 1
ಅಳೆದು ಭೂಮಿ ಬಳದಿ ಬಾರೊ
ಇಳಹಿ ತಳಿಯ ತಿಳದಿ ಬಾರೊ
ಅಳಿದು ದೈತ್ಯಬಲವ ಮುರಿದು
ಕೊಳಲನೂದಿ ಬಳಲಿ ಬಾರೊ 2
ಸುಳ್ಳ ವ್ರತನಳಿದಿ ಬಾರೊ
ಸುಳುಹಿ ತೇಜ ಹೊಳಿದಿ ಬಾರೊ
ಹೊರೆದು ಸಲಹುವ ಸ್ವಾಮಿ ಬಾರೊ 3