ಶ್ರೀಗುರುವೆ ತಾಯಿ ತಂದೆನಗ ನೀನು ಧ್ರುವ
ತಾಯಿ ತಂದೆನಗ ನೀ ಬಾಹ್ಯಾಂತ್ರ ಪರಿಪೂರ್ಣ
ಸಾಯೋಜ್ಯ ಸದ್ಗುರುನಾಥ ನೀನೆ
ಸಂಜೀವ ಸಾಕ್ಷಾತ ನೀನೆ
ಕಾವ ಕರುಣಾಳು ವರದಾತ ನೀನೆ
ಇಹಪರದೊಳು ಸಕಳಾರ್ಥ ನೀನೆ 1
ಕರುಣ ಆನಂದದಲಿ ಹೊರೆದು ಸಲಹುವ ಮೂರ್ತಿ
ಪರಮ ಜೀವದ ಅತಿ ಮೈತ್ರ ನೀನೆ
ಸರ್ವ ಙÁ್ಞನಿಗಳ ಕುಲಗೋತ್ರ ನೀನೆ
ದ್ರವ್ಯ ಧನವನು ಸಂಚಿತಾರ್ಥ ನೀನೆ
ಪೂರ್ವಪ್ರಾಚೀನ ಪುಣ್ಯಸೂತ್ರ ನೀನೆ 2
ಬಾಲಕನ ಮ್ಯಾಲೆ ದಯಮಾಡಿ ಪಾಲಿಸುತೀಹ್ಯ
ಕುಲಕೋಟಿ ಬಂಧುಬಳಗ ನೀನೆ
ಮೂಲಪುರಷನ ಋಷಿದೈವ ನೀನೆ
ಪರಿ ಬಲವು ಇಳಯೊಳಗೆ ನೀನೆ
ಸಲಹುತಿಹ ಮಹಿಪತಿಸ್ವಾಮಿ ನೀನೆ 3