ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರುಗೊಂಡಳು ಇಂದಿರಾದೇವಿ | ಮದನ ಮೋಹನ ದಿವ್ಯ ಮೂರುತಿಯಾ || ಸದಮಲಾನಂದ ಕೀರುತಿಯಾ ಪ ನವ ಸ್ವರ್ಣ ಹರಿವಾಣದಿ ಕಂಚ ಕಲಶನಿಕ್ಕಿ | ಹವಳದಾರತಿ ರನ್ನ ಜ್ಯೋತಿಯಲಿ || ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು | ನವರತ್ನ ನಿವಾಳೆಯ ಕೊಡುತಾ1 ಮತ್ಸ್ಯ ಕ್ರೋಢ ನರಸಿಂಹ | ಜಯ ಮುನಿವಟು ಭಾರ್ಗವ ರೂಪನೆ || ಜಯ ರಾಮ ಶ್ರೀ ಕೃಷ್ಣ ಜಯ ಬೌದ್ಧ್ಯ ಕಲ್ಕಿಯೆ | ಜಯವೆಂದು ಬೆಳಗಿ ಪಾದಕೆ ನಮಿಸಿ ||2 ಕರೆದೊಯ್ದು ತೂಗು ಮಂಚದಿ ಕುಳ್ಳರಿಸಿ | ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ || ಗುರು ಮಹೀಪತಿ ಸುತ ಪ್ರಭುವಿನ ಸವಿ ಸವಿ | ಕರುಣ ಮಾತುಗಳಾಡಿಸುತಾ ಹರಿಯಾ ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು