ಎನಗಿನ್ಯಾತರ ಹಂಗೇನು |
ಘನ ಗುರು ತಾನಾದ ಶ್ರಯಧೇನು ಪ
ಸುರಲೋಕ ಪದವಿಯ ಸುಖದಿಚ್ಛೆಯಾತಕ |
ಪರಗತಿ ದಾಯಕ ದೊರಕಿರಲಿಕ್ಕೆ 1
ರಿದ್ದಿ ಶಿದ್ದಿಗಳೆಂಬ ಮಾತಿನ ಗೊಡವಿಲ್ಲಾ |
ಪಾದ ಕಮಲಾ 2
ಹಂಬಲಿಸೆನು ಯೋಗ ಭೋಗ ಮುಕ್ತಿಯ ನಾಲಕು |
ಅಂಬುಜಾಕ್ಷನ ಸೇವೆಲಿರುವುದೇ ಸಾಕು 3
ತಂದೆ ಮಹೀಪತಿ ಪ್ರಭು ದಯದಿಂದಲಿ |
ಕಂದಗ ವಿಶ್ರಾಂತಿ ಇದಿರಿಟ್ಟಿರಲಿ 4