ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಲೋಕನೀತಿ ಹರೇ ಪಾಹಿ ಮಾಂ ಸದಾ ಪ ಭವದೊಳೆನ್ನ ಬಳಲಿಸಲಿ ತವ ಹಿತವೇನಿಹುದಿದರೊಳು ತವಕದಿಂದ ಕೊಡು ದಯಾಳು ನವವಿಧ ಭಕುತಿ ನಿನ್ನೊಳು 1 ಲೋಕ ಪಾಲಕನೆಂಬೊ ಬಿರುದು ಈ ಕಾಲಕೆ ತೋರೊ ಒಲಿದು ಸಾಕಲಾರೆನೆನಲು ಬಿಡದು ನೀ ಕರುಣಿಸು ದÀಯಾಸಿಂಧು 2 ಧೀರ ಶ್ರೀ ಹನುಮೇಶವಿಠಲಾ ಮೀರಿದ ಕಾರ್ಯವು ಇದಲ್ಲಾ ಸಾರ ಮಾರ್ಗ ತೋರಿ ಸುಫಲಾ ಮಾರಜನಕ ಕೊಡು ಗೋಪಾಲ 3
--------------
ಹನುಮೇಶವಿಠಲ
ಏನಿದು ಚಿತ್ರ ಎಲೋ ಕಂಜನೇತ್ರ ಪ ದೀನನು ನಾನೆಂದು ದಿನ ದಿನ ಮೊರೆಯಿಡೆ ನೀನು ಮಾಡಿದ ಕರ್ಮವೆಂದು ತಪ್ಪಿಸಿಕೊಂಬ ಅ.ಪ ಮಾನಸದಲಿ ಸಾಕ್ಷಿಯಾಗಿ ನೀನಿಲ್ಲವೇ 1 ಯುಕುತಿ ಮಾತು ಇದಲ್ಲ ವೇದಶಾಸ್ತ್ರ ಪ್ರಮಾಣ2 ಸತ್ಯ ಸಂಕಲ್ಪನೆಂದು ಪೇಳುವರೆಲ್ಲರು ಭೃತ್ಯರ ಸಲಹದ ಪ್ರಭುತ್ವವೇತಕೆ ನಿನಗೆ 3 ದೇವ ನಿನ್ನ ಚಿತ್ತವೋ ಎನ್ನ ಪುರಾಕೃತವೋ 4 ಕರಣಾಭಿಮಾನಿಗಳಿಗೊಡೆಯ ನೀನಲ್ಲವೇ 5 ಭಾವ ಕೊಡುವುದಕೆ ಬಡತನವೆ ನಿನಗೆ 6 ನೀನೆ ಸರ್ವ ಸ್ವತಂತ್ರ ಗುರುರಾಮ ವಿಠಲ 7
--------------
ಗುರುರಾಮವಿಠಲ
ದೈವಕೃಪೆ ಇದಲ್ಲಾ ಇವರಿಗೆ ಭಾವ ಶುದ್ಧಿಯಿಲ್ಲಾ ಪ ದೇವತೆಗಳು ಸಂತೋಷಿಸರೆಂದಿಗು ನಾವೆಂಬಹಕಾರದಿ ಮಾಳ್ಪದರಲಿ ಅ.ಪ ಮದುವೆಯ ಪೆಸರಿರಿಸಿ | ದೂರದಿಂ ವಿವಿಧ ಬಂಧುಗಳ ಕರಸಿ ವಧುವರರಿಗವರು ವುಡುಗೊರೆ ವೋದಿಸ- ಲದನೇಯವರಿಗೆ ಹಿಂದಕ್ಕೆ ಕೊಡುವುದು 1 ಕೊಡದಿದ್ದರೆ ಕೋಪಾ | ಕೊಟ್ಟರೆ ಕಡು ಮೂಢರಿಗೆ ಪುಣ್ಯವೆಲ್ಲಿಹುದು ಸಡಗರ ಭ್ರಾಂತಿಯು ಡಂಬವು ಬರಿದೆ 2 ತಂತ್ರಗಳಾಚರಿಸೆ ಯಂತ್ರೋದ್ಧಾರಕ ಗುರುರಾಮವಿಠಲಾ ಸಂತಸಡುವನೆ ಧನವ್ಯಯ ಬರಿದೆ 3
--------------
ಗುರುರಾಮವಿಠಲ
ನಾರಾಯಣ ಎನ್ನಿರೊ ಸಜ್ಜನರೆಲ್ಲಪ. ಸಾರರಹಿತ ಸಂಸಾರದಲಿ ಪರಸಾರ ಇದು ಎಂದು ಸಂಸಾರಿ ನೀವೆಲ್ಲ ಅ.ಪ. ಇಹಪರ ಸುಖವುಂಟೋ ಇದರ ಫಲಬಹಳ ಕಟ್ಟಿದ ಗಂಟೋ ಘನಮಹಿಮಗೆ ಇದುಮಹಮಹಿಮೆ ಇದಲ್ಲದೆ ಮಹಿಮೆಯೊಳಗಿದುಮಹಾರಸವಾದಂಥ ಮಂತ್ರ ಮಹಭಕುತಿಪೂರ್ವಕವಾಗಿ ಒಮ್ಮೆ 1 ಹಸಿವೆಯ ಶ್ರಮವಿರಲಿ ಹಸಿವಿರದೆ ಹ-ರುಷವು ತಾನಿರಲಿ ರಸಿಕಶ್ರಮ ಕೆರಳಿ ಮಾ-ನಸ ವಶವು ಆಗಲಿ ಆಗದಿರಲಿದೋಷವಾಗಲಿ ಶುದ್ಧವಾಗಲಿ ಶ್ರೀಶನ ಮರೆಯದೆ ಹಾಂಗೆ 2 ಚೋರನೆಂದೆನದೆ ಚಿತ್ತದಲಿಜಾರನೆಂದೆಣಿಸದೆ ಸ್ಮರಣೆ ಮಾತ್ರದಿ ಬಹಳಪಾರರಹಿತ ಅನರ್ಥಸಂಚಿತಹರಣ ಮಾಡುವ ಪವನ ಪ್ರಿಯ ಸರ್ವರಂತÀರ ಹಯವದನ 3
--------------
ವಾದಿರಾಜ
ಶ್ರೀನಾಥ ಶ್ರೀನಾಥ ಶ್ರೀನಾಥ ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ ತಾನೋಡಿಸುವುದು ಹೃತ್ತಾಪ ವನಂಬೆನೆ ಹರಿಯ ಪ್ರತಾಪ ಪ ಬಂಗಾರದ ಲತೆಯಂತೆ ಬಳುಕುವಳು ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು ಮೋಹನ ಮಾಲೆಗಳ ಕಟ್ಟಿಹಳು ಕುಂಭ ಕುಚದ ಭಾರಕ್ಕೆ ತಡಿಯಳೂ ತುದಿಬೆರಳಲಿ ಗಲ್ಲವನೊತ್ತಿಹಳು ಕೇಸರಿ ಗಂಧ ಹಚ್ಚಿಹಳು ಹೊಂಗ್ಯಾದಿಗೆ ಪೋಲುವ ಮೈಬಣ್ಣ ಹೊಮ್ಮಸದಲಿ ಹೋಲುವ ಈ ಹೆಣ್ಣು ಹಿಂಗಡೆಯಲಿ ವರ ಹೆರಳು ಭಂಗಾರ ಹಿಮ್ಮಡಿ ಬಡಿಯೋದು ಸರ್ಪಾಕಾರ ಭಂಗಿಸುವಳು ಬಹು ದೈತ್ಯರ ಹೃದಯ ಬಹು ವಿಲಾಸದಿ ತೋರ್ಪಳು ಸಖಿಯ ಅಂಗಜದರು ಗಂಧಕೆ ಅಳಿವೃಂದ ಆಡುತಲಿಗೆ ಝೇಂಕಾರಗಳಿಂದಾ ಸಂಗಡನೆರದ ಸುರಾಸುರರಿಂದ ಸತಿ ಚಲುವಿಂದಾ ಮಂಗಳಮುಖಿ ನಮ್ಮಂಗಳ ಮೋಹಿಸಿ ಭಂಗನ ಪಡಿಸುವಳೈ ತ್ರಿಜಗವ ಜಗಂಗಳ ಪಾಲಿಸುವಳು | ಮನ ಸಂಗಡ ಅಪಹರಿಸುವಳು | ಜಡ ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು ಸಾರಂಗಿ | ಸಾರಂಗಿ | ಸಾರಂಗೀ ಸಾಂಬಮದ ಭಂಗಿ | ಬಹಳ ಸುಖಸಂಗಿ ಸುಂದರಿ ಲಲಿತಾಂಗಿ | ಮೋಹನಾಪಾಂಗೀ ಬಡು ಹೆಂಗಲ್ಲ ಈಕೆ ಬಹುಭಂಗ ಬಡುವಿರಿ ಜ್ವಾಕೆ || ಶ್ರೀನಾಥ || 1 ಕನ್ನಡಿಯಂದದಿ ಪೋಲುವ ಕಪೋಲ ಕರ್ಪೂರ ರಂಜಿತ ವರ ತಾಂಬೂಲ ಕಣ್ಣಿಗ್ಹಚ್ಚಿಹಳು ಕನಕದ ಕೋಲಾ ಕಾಮಿನಿಯಂದಡಿ ತೋರ್ಪಳು ಜಾಲಾ ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ ಚಪಲಾಕ್ಷಿಯ ನೋಟದ ಬಲು ರಭಸಾ ಕರ್ಣಾಯತ ನೇತ್ರಗಳ ವುಲ್ಲಸಾ ವುನ್ನಂಕಾ ನಾಶಿಕದ ಬುಲಾಕು ವಜ್ರಮಯದ ವರಮಖರೆದ ಬೆಳಕು ಕರ್ಣದಿ ರತ್ನಖಚಿತ ತಟಾಂಕಾ ಕುಸುರು ಹಚ್ಚಿದ ಬಾಹುಲಿಗಳ ಬಿಂಕ ಸಣ್ಣ ನಡುವಿನೊಯ್ಯಾರದ ನಲ್ಲೆ ಸರಸಿಜನಾಭನ ಸೃಷ್ಟಿ ಇದಲ್ಲೆ ಬಣ್ಣಿಸಲಳವಲ್ಲವು ಸೌಂದರ್ಯ ಬಿಡಿಸುವುದು ಕೇಳ ಮುನಿಗಳ ಧೈರ್ಯ ಬೆಣ್ಣೆಯಂತೆ ಮೃದುವಾದ ಶರೀರ ಭಾಗ್ಯಹೀನರಿಗೆ ಇದು ಬಲುದೂರಾ ಕನ್ನೆ ಶಿರೋಮಣಿ | ಕಾಮನ ಅರಗಿಣಿ ಕೌಸ್ತುಭಮಣಿಗಳ ಹಾರೇ ಸುವರ್ಣವರ್ಣ ಸುಕುಮಾರೇ ಮೋಹನ್ನರಸನೆ ಗಂಭೀರೇ ಮೋಹನ್ನೆ ಮಧುರ ಮಧುರಾಧರ ಮಂಜುಳ ವಕುಜಲರೆ ಬಹೋಚ್ಚಧರೆ ಛÅಪ್ಪನ್ನ ಛಪ್ಪನ್ನ ದೇಶಗಳು ಚಲುವರಿದ್ದರೂ ಚಪಲಾಕ್ಷಿಗೆ ಸಮರಾರೇ ಗತ ಪುಣ್ಯದಿಂದ ಕೈಸೇರುವಳಲ್ಲದೇ ಕಾಮಾಂಧsÀರಿಗತಿ ದೂರೇ ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು ಸುರಾಸುರರನ್ನೆ ಮೋಹಿಸಳು ಚನ್ನ ಮನಕೆ ತರಳಿನ್ನ ಬಿಡು ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು ತನ್ನ ಜನರಿಗಮೃತಾನ್ನ ಕೊಡುವಳು ಮಾನ್ಯಳು ಪರಮಸೋನ್ಯಳು | ಸುಗುಣ ಅರಣ್ಯ ವಿನಾಶೇ ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || 2 ಹುಡುಗಿ ನೋಡು ಹೊಸ ಪರಿಯಾಗಿಹಳು ಹದ ಮೀರಿದ ಯವ್ವನದಿ ಮೆರೆವಳು ಅರಳು ತುಂಬಿಹಳು ಮಂದಸ್ಮಿತದಲಿ ಮೋಹಿಸುತಿಹಳು ಬೆಡಗಿನಿಂ ನುಡಿಯ ಸವಿಯ ತೋರುವಳೂ || ಬಹು ವಿಧದಾಭರಣಗಳನ್ನಿಟ್ಟಹಳು ನಡಿಗಿಗಳಿಂದ ನಾಚುತ ಹಂಸ ನವಮಣಿ ಚಂದ್ರರ ಕೆಡಿಸಿತು | ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ ಜಗವನು ಮೋಹಿಸುವಳು ಸುಶ್ರೋಣೀ ಬಿಂಕದ ನುಡಿ ಸೊಬಗಿನ ಚಂದಾ ಅಡಗಿದವೆ ಪಿತಭೃಂಗಗಳಿಂದಾ ಹಿಡಗಿ ಮರಗಿ ಮಧ್ಯಶಮನ ಮರಗೀ ಕೇಸರಿ ಬಹು ಸೊರಗೀ ಉಡುಪತಿ ಕೋಟಿ ಪ್ರಭ ಧಿಕ್ಕಾರಾ ಉಲ್ಲಾಸದಿ ಮನ ಮುಖ ಚಂದಿರಾ ನಡಿಗಗಳಿಂದೆನೆ ರಾಜಿಸುತಿ ಹೋದೆ ನವರತ್ನದಯದೆ ಮಯದ ಫಣಿಕಟ್ಟು ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ || ಶ್ರೀನಾಥ || 3
--------------
ವಿಜಯದಾಸ
ಈ ದುರ್ಮಾರ್ಗಗಳನ್ನು ಪೀಡಿಸಬೇಡೈ |ಮಾಧವನೆ ಇಂದಲ್ಲ ಜನುಮ ಜನುಮದಲೀ ಪಮಾತಾ ಪಿತರರ ಆಜೆÕ ಮೀರಿ ನಡೆಯಿಸಬೇಡ |ಜಾತಿ ಧರ್ಮವ ಬಿಟ್ಟನೆನಿಸಬೇಡ ||ಈತುಚ್ಛವಿಷಯದಾಪೇಕ್ಷೆ ಮಾಡಿಸಬೇಡ |ಭೂತೇಶನೇ ಪರಮಾತ್ಮನೆನಿಸಬೇಡ 1ಹರಿದಿನದಲಿ ಬಿಂದುಉದಕಕುಡಿಯಿಸಬೇಡ |ಪರದ್ರವ್ಯದಲೀಷ್ಟ ಕೊಡಲು ಬೇಡ ||ನಿರುತ ಪರರಾ ನಿಂದಾವನ್ನು ಮಾಡಿಸಬೇಡ |ನರರ ಸೇವಿಸಿ ಬದುಕಿಸಲಿಬೇಡ 2ಸಣ್ಣ ಮಾನವರ ಸಂಗತಿಯ ಕೊಡಲಿಬೇಡ |ಅನ್ಯ ಶಾಸ್ತ್ರಗಳ ಕೇಳಿಸಲು ಬೇಡ ||ನಿನ್ನ ದಾಸಾನಾಮತವ ಬಿಟ್ಟು ಇರಿಸಬೇಡ |ಯನ್ನದೀ ಶರೀರಾದಿಯೆನಿಸಬೇಡ 3ಉತ್ತಮರ ಪೂಜೆಗೆಜಾಗುಮಾಡಿಸಬೇಡ |ವಿತ್ತವ ಸಜ್ಜನರಿಗೆ ಕೊಡಿಸಬೇಡ ||ನಿತ್ಯಸತ್ಕಥಾ ಶ್ರವಣವಿಲ್ಲದಲ್ಲಿಡಬೇಡ |ಸತ್ಯೇಶ ಯನ್ನ ಮಾತು ಮರೆಯಬೇಡ 4ಪ್ರಾಣೇಶ ವಿಠ್ಠಲ ನಿನ್ನನಲ್ಲದೆ ಎಂದೆಂದು |ಹೀನ ದೇವತೆಗಳಿಗೆ ಮಣಿಸಬೇಡ ||ಮಾನುಷ್ಯೋತ್ತಮಾದಿ ಬ್ರಹ್ಮಾಂತ ದಿವಿಜರಲ್ಲಿ |ನ್ಯೂನಭಕುತಿಯನ್ನು ಕೊಡಲಿಬೇಡ 5
--------------
ಪ್ರಾಣೇಶದಾಸರು