ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ರಂಗಾನಟ್ಟೂಳಿಗೆ | ಇರಲಾರೆವಮ್ಮಾ ನಾವುಬಂದುಪಾಯವ ಕಾಣೆವೆ | ವನಿತೆ ಗೋಪ್ಯಮ್ಮಾ ಕೇಳೆ ಪ ಹಿರಿಯರಾದವರಿಗೆ | ಭರದಿ ಪೇಳೇವೆಂದರೆಸರಸಿಜ ಸಂಭವನಿಗೆ ಹಿರಿಯನೀತ ಕಾಣಮ್ಮ 1 ಮಾಯಗಳ ಮಾಡಿ ನಾವೂ | ಹೊಯಿಲೆಬ್ಬಿಸೇವೆಂದರೆಮಾಯಾದೇವಿಗೆ ಸಿಗದೆ | ಮಾಯಾವ ತೋರುವನಮ್ಮ 2 ಗುಮ್ಮನ ತೋರಿದರೀಗಾ | ಒಮ್ಮೊಮ್ಮೊ ಲೆಕ್ಕಿಸನಮ್ಮ ಅಮ್ಮಮ್ಮ ಶ್ರೀ ನಾರಸಿಂಹ | ಅದ್ಭತಾದ ದೈವ ಕಾಣಮ್ಮ 3 ಅರಿವಿ ಸರ್ಪಾನ ಮಾಡಿ | ಭರದಿ ಅಂಜಿಸೇವೆಂದರೆಖರೆಯವಾಗಿದ್ದ ದೊಡ್ಡಾ | ಉರಗಶಾಯಿ ಕಾಣಮ್ಮ 4 ಅರಸರಿಗ್ಹೇಳಿದರೂ | ಬರಿದಾಗುವುದೇ ನಿಜಧರೆ ಗಗನ ಪಾತಾಳದ | ಅರಸನಲ್ಲವೇನಮ್ಮ 5 ಕಾಸು ವೀಸಾ ಕೈಯ್ಯಾಳಿಟ್ಟೂ | ಕೂಸಿಗೆ ಬುದ್ಧಿ ಹೇಳುವೆಕೋಶ ಭಾಗ್ಯದಭಿಮಾನಿ | ಶ್ರೀಶನೇ ಈಶ ಕಾಣಮ್ಮ 6 ಪಾಪದ ಭೀತಿ ತೊರದು | ಭೂಪ ರಂಗ ಅಂಜಾನಮ್ಮಪಾಪ ರಹಿತರಾದವರ | ತಪಸಿಗಳೊಡೆಯಾನಮ್ಮ 7 ಮ್ಯಾಣದ ಚೇಳು ತೋರುವೆ | ಜಾಣ ರಂಗ ಅಂಜಾನಮ್ಮಮೇಣು ಮೂವತ್ತಾರು ಲಕ್ಷ | ತಾಂ ಶಿಂಶುಮಾರಾನಮ್ಮ 8 ಅನ್ನ ವಸನಗಳಿತ್ತು | ಮನ್ನಿಸೆವೆಂದಾರೆ ಪುಸಿಕನ್ಯೆ ದ್ರೌಪದಿ ದುಮ್ಮಾನ | ಮುನ್ನೆ ಇದಕ್ಕೇ ಸಾಕ್ಷಿಯಲ್ಲೆ 9 ಅಣ್ಣ ತಮ್ಮಾ ಬಂಧೂ ಬಳಗ | ಜನರುಂಟೇನೆ ಹೇಳೇವೆಅನಾದಿ ಕಾಲದಿಂದಾ | ಘನ್ನ ತಾನೇ ಏಕಮೇವ 10 ಚಿಣ್ಣ ನೀ ಅಣ್ಣಾ ಬಾಯೆಂದು | ಮನ್ನಿಸೇವೆಂದಾರೆ ಪುಸಿಅನಂತ ವೇದಗಳಿವನ | ಬಣ್ಣಿಸಿ ಹಿಂದಾಗಲಿಲ್ಲೆ 11 ಊರು ಕೇರಿಗಳಾ ಬಿಟ್ಟು | ದೂರ ಬಾರ ಹೋದೇವೇನೆಸಾರ ವ್ಯಾಪ್ತನಾಗಿ ಇಪ್ಪಾ | ಯಾರಿಗೆ ದೂರುವೆನಮ್ಮಾ 12 ಕದ್ದು ಕದ್ದೋಡುವಾ ನಮ್ಮ | ಲಿದ್ದು ಪಿಡಿಯಾಲೊಶವಲ್ಲೆ ರುದ್ದರನ್ನಾ ಓಡೀಸಿದಾ | ಮುದ್ದು ರಂಗಾನಿವನಮ್ಮ 13 ಹಗ್ಗದಿ ಕಟ್ಟೀದರಾಗ | ಬಗ್ಗನಮ್ಮಾ ನಿನ್ನ ಮಗಅಗ್ಗಳೀಕೆ ಖಳರ ಉಕ್ಕು | ತಗ್ಗಿಸಿ ಬಂದಿಹಾನಮ್ಮ 14 ಇಂದು ನಿನ್ನಾ ಕಂದನಾಟಾ | ಚಂದಾವೆಂದೂ ವಂದಿಸುವೆವೆತಂದೆ ವ್ಯಾಸಾ ವಿಠಲೆ*ಮಗೆ | ಬಾಂಧವಾನಾದನು ಕಾಣೆ 15
--------------
ವ್ಯಾಸವಿಠ್ಠಲರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು