ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಸಲಹೆನ್ನನು - ಸದಾನಂದಗೋವಿಂದ ಸಲಹೆನ್ನನು ಪ ಗೋವಿಂದ ಸಲಹೆನ್ನ ಕುಮುದಲೋಚನ ನಿನ್ನಸೇವಕರಡಿಯ ಸೇವಕನಯ್ಯ ಗೋವಿಂದ ಅ ಅಚ್ಯುತ ಸರ್ವೋ-ತ್ತಮನೆ ಚಿನ್ಮಯ ಗೋವಿಂದ - ನಿಶ್ಚಲಭಕ್ತಿಕ್ರಮವ ಬೋಧಿಸೊ ಗೋವಿಂದ - ಪಾಪವನೆಲ್ಲಶಮನಗೊಳಿಪ ಗೋವಿಂದ - ಲಕ್ಷ್ಮೀರಮಣನಮೋ ದಶಾವತಾರಿ ಗೋವಿಂದ 1 ಮನವೆನ್ನ ಮಾತು ಕೇಳದು ಕಾಣೊ ಗೋವಿಂದಮನವ ಗೆಲ್ಲುವ ಬಲ ಎನಗಿಲ್ಲ ಗೋವಿಂದಕನಸಿನಂತಿಹ ದೇಹ ಸ್ಥಿರವಲ್ಲ ಗೋವಿಂದಬಿನುಗು ಬುದ್ಧಿಗಳ ಬಿಡಿಸಯ್ಯ ಗೋವಿಂದನೆನಹು ನಿನ್ನೊಳಗಿಟ್ಟು ನಡೆಸಯ್ಯ ಗೋವಿಂದನೆನೆವ ದಾಸರ ಮನದೊಳಗಿರ್ಪ ಗೋವಿಂದವನಜಲೋಚನ ನಾ ನಿನ್ನವನಯ್ಯ ಗೋವಿಂದಘನ ಮಹಿಮನೆ ನಿನ್ನ ಮೊರೆಹೊಕ್ಕೆ ಗೋವಿಂದಮುನಿಗಳ ಮನದೊಳು ಮಿನುಗುವ ಗೋವಿಂದನಿನಗಲ್ಲದಪಕೀರ್ತಿ ಎನಗೇನೊ ಗೋವಿಂದಜನನ ರಹಿತ ಗೋವಿಂದ - ನಿನ್ನಡಿಗಳನೆನವು ಕೊಡೊ ಗೋವಿಂದ - ದುರ್ವಿಷಯ ವಾ-ಸನೆಯ ಬಿಡಿಸೊ ಗೋವಿಂದ - ಕುತ್ಸಿತ ಕೆಟ್ಟತನವ ಬಿಡಿಸೊ ಗೋವಿಂದ - ಸದ್ಗುಣವೆಂಬಧನವ ತುಂಬಿಸೊ ಗೋವಿಂದ - ಇದಕ್ಕೆ ಬಡ-ತನವೆ ನಿನಗೆ ಗೋವಿಂದ - ಸದಾ ನಿನ್ನಘನ ಸ್ಮರಣೆ ಕೊಡು ಗೋವಿಂದ - ಸನಕಸನಂದನಾರ್ಚಿತ ಗೋವಿಂದ 2 ಕಿನ್ನರ ಸನ್ನುತ ಗೋವಿಂದ - ಅಪರಿಮಿತಕರುಣಾಸಾಗರ ಗೋವಿಂದ - ಅರಿಯದಂಥಪರಮ ಜ್ಯೋತಿಯೆ ಗೋವಿಂದ - ಗಂಗೆಯ ಪೆತ್ತಚರಣ ನಿರ್ಮಲ ಗೋವಿಂದ - ತೆತ್ತೀಸ ಕೋಟಿಸುರರ ಪೊರೆವ ಗೋವಿಂದ - ಶ್ರೀವೈಕುಂಠಪುರದೊಳಗಿಹ ಗೋವಿಂದ - ಅಚ್ಯುತಾನಂತತಿರುಪತಿ ನೆಲೆಯಾದಿ ಕೇಶವ ಗೋವಿಂದ 3
--------------
ಕನಕದಾಸ
ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ ಕ್ಲೇಶ ಯಾತಕೇ ಕಾಸು ಕಳಕೊಂಡು _ ಅತಿಘಾಸಿ ಯಾತಕೇ ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು 1 ನೇಮ ಯಾತಕೇ _ ನಿಷ್ಠೆ ಯಾತಕೇ ಹೋಮ ಯಾತಕೇ _ ಕಷ್ಟಯಾತಕೇ ಪ್ರೇಮದಿಂದಲೀ _ ಇವರ ಭಜಿಸಲೂ ತಾಮಸಗುಣ _ ತಾನೇ ಓಡೋದು 2 ಮಧ್ವಶಾಸ್ತ್ರದ _ ಚಂದ್ರರಿವರು ಅದ್ವೈತವಾದವ _ ಗೆದ್ದಸಿಂಹರು ಮಧ್ವರಾಯರಾ _ ಮುದ್ದುಮೊಮ್ಮಗ ಸಿದ್ಧಸೇವ್ಯರು _ ಸುಧೆಯ ಕರ್ತರು 3 ಇವರ ಧ್ಯಾನವೂ _ ಜ್ಞಾನದಾಯಕಾ ಇವರ ಪೂಜೆಯೂ _ ಪಾಪನಾಶನ ಇವರ ಸ್ಮರಣೆ _ ಕಲಿವಿ ಭಂಜನೆ ಇವರ ಸೇವೆಯು _ ಮುಕ್ತಿಸೋಪಾನ 4 ಶ್ರೀಕಳತ್ರನಾ _ ಆಜ್ಞೆಯಿಂದಲಿ ನಾಕದಿಂದಲೀ _ ಇಲ್ಲಿ ಬಂದರು ಏಕಮನದಿ _ ಶರಣು ಹೋಗಲು ಪಾಪನಾಶನ _ ಪುಣ್ಯವೆಗ್ಗಳಾ 5 ಮಳಖೇಡದೀ _ ನೆಲಸಿ ಇಪ್ಪರೂ ನಳಿನನಾಭನ _ ಒಲಿಸುತನುದಿನಾ ನಲಿಸಿ ಮನದೊಳು _ ಒಲಿಸುವಾತನೆ ಶೀಲವಂತನು _ ಧನ್ಯ ಮಾನ್ಯನು6 ನರನ ವೇಷದಿ _ ಸುರರ ಒಡೆಯನೊ ಹರಿಯ ಕರುಣದಿ _ ಮೆರೆಯುತಿರ್ಪರು ಶರಣಜನರ _ ದುರಿತರಾಶಿಯ ತರಿದು ಶೀಘ್ರದಿ _ ಪೊರೆಯುತಿಪ್ಪರು7 ಎತ್ತಿನ್ವೇಷದಿ _ ವಾತದೇವನ ಪ್ರೀತಿ ಪಡೆದು _ ಖ್ಯಾತಿಆದರು ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ ಬಿತ್ತರಿಸಿದರು, ತತ್ತ್ವಶಾಸ್ತ್ರವ 8 ಕಾಗಿನೀನದೀ _ ತೀರವಾಸರು ವಿಗತರಾಗರು _ ನಿತ್ಯತೃಪ್ತರು ಜಾಗರೂಕದಿ _ ಪೊಗಳಿ ಪಾಡಲು ನಿಗಮವೇದ್ಯನು _ ಬೇಗ ಪೊರೆಯುವ 9 ಶೇಷಾವೇಷದಿ _ ವಾಸಿಸುವರು ಶೇಷಶಯನನ _ ದಾಸರೀವರು ಬೆಸರಿಲ್ಲದೆ _ ಆಸೆ ತೊರೆದು ದಾಸನೆನ್ನಲು _ ಪೋಷಿಸೂವರು 10 ಕೆರೆಯ ಏರಿಯು _ ಬಿರಿದು ಪೋಗಲು ಮೊರೆಯ ಇಟ್ಟರು _ ಇವರ ಅಡಿಗೆ ಭರದಿ ಕರುಣದಿ ಹರಿಯ ಸ್ತುತಿಸಿ ಕರದಿ ಮುಟ್ಟಲು _ ಏರಿ ನಿಂತಿತು 11 ಯರಗೋಳದ _ ಗುಹೆಯ ಒಳಗೆ ಮರುತದೇವನ _ ಕರುಣದಿಂದಲಿ ಪರಿಪರಿಯಲಿ _ ಬರೆದು ಟೀಕೆಯ ಕರೆದು ಸುರಿದರು _ ತತ್ತ್ವಕ್ಷೀರವ 12 ಇವರ ನಾಮವು _ ವಿಜಯ ಸೂಚಕ ಇವರ ಕೀರ್ತನೆ _ ಭವಕೆ ಔಷಧ ಇವರ ಕರುಣದಿ _ ಅನಿಲನೊಲಿವನು ಇವರ ಶಿಷ್ಯರೇ _ ಅವನಿಶ್ರೇಷ್ಠರು 13 ಸರ್ವಕ್ಷೇತ್ರದ _ ಯಾತ್ರೆಯಾ ಫಲ ಸರ್ವದಾನವ _ ಮಾಡಿದ ಫಲ ಇವರ ಪಾದವ _ ನಂಬಿ ಭಜಿಸಲು ತವಕದಿಂದಲಿ _ ತಾನೇ ಬರುವುದು 14 ಜಯತೀರ್ಥರ _ ಹೃದಯವಾಸಿಯು ವಾಯುಹೃದಯಗ _ ಕೃಷ್ಣವಿಠ್ಠಲನು ದಯದಿ ನುಡಿಸಿದಾ _ ಪರಿಯು ಪೇಳಿದೆ ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ15
--------------
ಕೃಷ್ಣವಿಠಲದಾಸರು
ಹತ್ತು ಸಾರೆ ಬಾರದಲೆ ತೊಲಗೆನಮ್ಮಪ ನಿರಾಧಾರಾದಿ ನಿದ್ರೆ ಬಾರದಮ್ಮ ವಿ ಚಾರಿಸು ತಾಯಿ ಪಾಲುವಲ್ಲೆನಮ್ಮ ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ ಸಾರಿ ಸಾರಿಗೆ ಬಾಯಿ ತೆರೆವೆನಮ್ಮ 1 ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು ಕರ ಚಾಚೆನಮ್ಮ ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ ದೇಹವಿಲ್ಲದೆ ನಾರೇರು ಬಡಿಸಲಮ್ಮ 2 ಇದೇ ಕೇಳಿದೆನು ಇನ್ನು ಮೌನವಮ್ಮ ಬಲು ಸದಮಲ ಜ್ಞಾನಿಗಳಿಗೆ ಪ್ರೀತಿಯಮ್ಮ ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ ಹೃದಯದೊಳಗಾನಂದವಾಸನಮ್ಮ 3
--------------
ವಿಜಯದಾಸ