ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಕು ಸಮ್ಮತನಾಗೆಲೋ ನೀ ನದಕುನು ಸಮ್ಮತನಾಗೆಲೊ ಪ ಇದು ಅದು ಎಂಬುದರ್ವಿಧವ ತಿಳಿದು ನೀ ನೆದಕುನು ಸಮ್ಮತನಾಗೆಲೊ ಅ.ಪ ಕಡುಸಿರಿಯೆಂಬುದು ಮರವೆಕುಣಿ ಬಡತನವೆಂಬುದು ಅರಿವಿನಮನೆ ಒಡೆತನವೆಂಬುದು ಪಾಪದ ಗೋಣು ದುಡಿತವೆಂಬುವುದು ಜ್ಞಾನದ ಖನಿ ದೃಢದಿಂದರಿದು ಹುಡುಕಾಡಿದರೋ ಳ್ಹಿಡಕೋ ನಿನಗೆ ಹಿತವಾವುದು ನೋಡಿ1 ಕೆಟ್ಟ ಸಂಸಾರ ಹೇಯಮೂತ್ರ ಕುಣಿ ನಿಷ್ಠೆ ಭಕ್ತಿ ಆನಂದಾಮೃತ ಖಣಿ ದುಷ್ಟಜನರ ಸಂಗ ನರಕಕುಣಿ ಶಿಷ್ಟ ಸಜ್ಜನಸಂಗ ಮುಕ್ತಿಮನೆ ನಿಷ್ಠೆಯಿಂದರಿತು ಇಷ್ಟರೊಳಗೆ ನೀ ಇಷ್ಟಕೆ ಬಂದದ್ದು ಹಿಡಕೋ ನೋಡಿ 2 ನರರ ಸೇವೆ ಮಹ ದುರಿತಬೇರು ಶರಣರ ಸೇವೆ ಸ್ಥಿರಸುಖದ ತವರು ಬರಿದೆ ಕೆಡದೆ ಹರಿಚರಣ ಕೋರು ಮರುಳು ಗುಣಗಳೆಲ್ಲ ತರಿದು ತೂರು ಧೀರ ಶ್ರೀರಾಮನ ಚಾರುಚರಣ ಸೇರಿ ಪರಮಪದವಿಯೊಳು ಲೋಲ್ಯಾಡು 3
--------------
ರಾಮದಾಸರು
ಸಂತೆ ಮಾಡಿದರೆ ಸಂಸಾರ ಸಂತೆ ಮಾಡಿದನೆಸಂತೆಯವರ ನಂಬಿದರೆ ಕೆಟ್ಟುಹೊಗುವೆ ಕಾಣೆಪತಂದೆತಾಯಿ ನೆವಗಳಿಂದ ಸಂತೆಗೆ ಬಂದೆಬಂದು ಕೂಡಿದನುಗಂಡಜೋಡಾದೆನು ಎಂದೆಬಂದನೀಗ ಮಗೆನೆಂಬುವನು ಸೊಸೆಯು ಆತನ ಹಿಂದೆಬಂಧುಬಳಗ ಬಹಳಾಯಿತು ನೆರೆದುದು ಸಂತೆಯು ಮುಂದೆ1ಸಂತೆ ಮಾಡಿಕೊಂಡು ಗಂಡನೀಗ ತೆರಳಿದನೆಅಂತು ಸಂತೆಯ ಮಾಡಿ ಮಗನೀಗ ಹೋಗಿಹನುಇದಕು ಮೊದಲೇ ಸೊಸೆಯ ಇಹಲೋಕ ಬಿಟ್ಟಿಹಳುಇಂತು ಸಂತೆಯ ಮಾಡಿ ಬಯಲಿಗೆ ಬಿದ್ದೆನೇ2ದಾರಿಕಾರರೆಲ್ಲ ಸರಿದು ಸಂತೆ ಬಯಲಾಗೆಆರಿಗಾರು ಇಲ್ಲವಾಗಿ ನನ್ನ ಬಿಟ್ಟು ಹೋಗೆಧೀರ ಚಿದಾನಂದಗುರುಕೈಯ ಹಿಡಿದ ಬೇಗನೀರೆ ಅಂಜಬೇಡವೆಂದು ಮುಟ್ಟಿಸಿದ ಮನೆಗೆ3
--------------
ಚಿದಾನಂದ ಅವಧೂತರು