ಹಯಗ್ರೀವ ವಿಠಲ | ಪೊರೆಯ ಬೇಕಿವನಾ ಪ
ಭಯ ಭರಿತ ಭಕ್ತಿಯಿಂ | ಪ್ರಾರ್ಥಿಸುತ್ತಿಹನು ಅ.ಪ.
ಗುರುತಂದೆ ಮುದ್ದು ಮೋಹ | ನರಿತ್ತಂಕಿತ ಪದಮರೆಯಾಗಿ ಕಾಣದಲೆ | ಪೋದುದಕ್ಕಾಗೀಪರಿತಪಿಸಿ ಬಹುವಾಗಿ | ಮೊರೆಯನಿಡುತಿಹ ಹರಿಯೆಕರುಣಿಗಳು ಗುರು ಪರವು | ಪದರಚಿಸಿ ಇತ್ತೇ 1
ಪರಿ ಪರಿಯಸೂಚಿಸೋ ಸನ್ಮಾರ್ಗ | ಸಾಧನಕೆ ಹರಿಯೇ ವಾಚಾಮ ಗೋಚರನೆ | ನೀಚೋಚ್ಚ ತರತಮವವಾಚಿಸುತ ಇವನಲ್ಲಿ | ಮೋಚಕನು ಆಗೋ 2
ಭವ ಶರಧಿ ದಾಟಿಸಲುತವನಾಮ ಸಂಸ್ಮøತಿಯ | ಶ್ರವಣ ಸುಖವಿತ್ತೂಭವರೋಗ ವೈದ್ಯ ಗುರು | ಗೋವಿಂದ ವಿಠ್ಠಲನೆಹವಣದಲಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 3