ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ಕøಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ 1 ಪೋರನಾ ಮಯಕಳೆದು | ತಾರತಮ್ಯ ಜ್ಞಾನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ 2 ಅನೇಕ ಜನ್ಮದಲಿ | ಹೀನಯೋನಿಲಿ ನೊಂದುಜ್ಞಾನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ 3 ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ 4 ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ 5
--------------
ಗುರುಗೋವಿಂದವಿಠಲರು
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ ಅನಂತಾನಂತ ಜನ್ಮ ಕಾದರು ಒಮ್ಮೆ ಚೆನ್ನ ಗೋಪಾಲ ಕೃಷ್ಣದೇವ ಅ.ಪ. ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು ಬಾಯದೆರೆಸೊ ಹೊಟ್ಟೆಗಾಗಿ ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು ದಾಯಾದಿಗಳಿಗೊಪ್ಪಿಸು ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು ಕಾಯಕ್ಲೇಶವನು ಪಡಿಸು ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು ನ್ಯಾಯ ಅನ್ಯಾಯವಾಗಿ ಶ್ರೀಶ 1 ಧನವನ್ನೆ ಕೊಡಿಸು ದಾನವನೆ ಮಾಡಿಸು ಗುಣವುಳ್ಳ ಮನುಜನೆನಿಸು ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು ಕ್ಷಣದೊಳಗೆ ಶುದ್ಧನೆನಿಸು ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು ತೃಣದಂತೆ ಮಾಡಿ ನಿಲಿಸು ನಿತ್ಯ ಮನದಿಚ್ಛೆಗಾರನೆ ದಿನ ಪ್ರತಿದಿವಸವಾಗೆ, ದೇವ 2 ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು ಪಾತ್ರ ಜನರೊಳು ಪೊಂದಿಸು ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು ಧಾತ್ರಿಯೊಳು ನೀಚನೆನಿಸು ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು ಸ್ತೋತ್ರಕ್ಕೆ ಯೋಗ್ಯನೆನಿಸು ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ ರಾತ್ರಿ ಹಗಲು ಎನ್ನದೆ ದೇವ 3 ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು ಜಪತಪವನೆ ಮಾಡಿಸು ಅಪಹಾಸ್ಯ ಮಾಡಿಸು ಅದ್ಭುತವನೈದಿಸು ಗುಪಿತರೊಳಗಧಿಕನೆನಿಸು ಉಪಕಾರಿ ನರನೆನಿಸು ಉದ್ದಂಡನಿವನೆನಿಸು ವಿಪುಳ ಮತಿಯಲಿ ನಿಲಿಸು ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ ಸಫಲಮತಿಯೀವ ದೇವ 4 ವೇದವನು ಓದಿಸು ವೇದಾರ್ಥಗಳ ನುಡಿಸು ಓದಿದರು ದಡ್ಡನೆನಿಸು ಹಾದಿಯನು ತಪ್ಪಿಸು ಹಿತದವರನಗಲಿಸು ಸಾಧು ಮಾರ್ಗವನೆ ಕೊಡಿಸು ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು ಉದರಕೋಸುಗ ತಿರುಗಿಸು ಪಾದದಲಿ ಗಂಗೆಯನು ಪೆತ್ತ ಪರಮಾನಂದ ಮೋದ ವಿನೋದವಾಗೆ ದೇವ 5 ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು ಮಣಿ ಭೂಷಣವ ತೊಡಿಸು ಘನ ಕವನ ಪೇಳಿಸು ಕೌತುಕವನೈದಿಸು ವನ ಭುವನದೊಳು ನಿಲಿಸು ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು ಬಿನುಗು ವೈರಾಗ್ಯನೆನಿಸು ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ ಎನಗೆ ನೀನೆ ಸದ್ಗತಿ ಸ್ವಾಮಿ 6 ಯಾವುದಾದರು ನೀನು ಇತ್ತುದಕೆ ಎನಗಿಷ್ಟು ನೋವು ಒಂದಾದರಿಲ್ಲ ಜೀವೇಶರೊಂದೆಂಬ ದುರ್ಮತವ ಕೊಡದಿರು ಭಾವದಲಿ ನಾ ಬೇಡುವೆ ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ ನಾನೊಲ್ಲೆ ಮಿಥ್ಯಮತವ ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ ಪಾವನ್ನ ಮಾಳ್ಪ ಶಕ್ತ ವ್ಯಕ್ತ 7
--------------
ವಿಜಯದಾಸ
ಹನುಮಂತ ವಿಠ್ಠಲಾ | ಪೊರೆಯ ಬೇಕಿವಳಾ ಪ ಘನ ಮಹಿಮ ನಿನ್ಹೊರತು | ಅನ್ಯರನು ಕಾಣೇ ಅ.ಪ. ಸ್ವಾಪದಲಿ ಗುರುದರ್ಶ | ಅಂತೆ ಅಂಕಿತ ಪತ್ರತಾ ಪಿಡಿದು ನಿಂತಿಹಳೊ | ಶ್ರೀಪ ಸೀತಾಪತೇ |ಕಾಪಟ್ಯರಹಿತಳನು | ಕೈಪಿಡಿದು ಸಲಹೆಂದುನಾ ಪ್ರಾರ್ಥಿಪೆನೊ ನಿನ್ನಾ | ತಾಪಸ ಸುವಂದ್ಯಾ 1 ಕನ್ಯೆಯಗಭಯದನಾಗಿ | ಮುನ್ನಪತಿ ಸೇವೆಯನುಚೆನ್ನಾಗಿ ದೊರಕಿಸುತ | ಕಾಪಾಡೊ ಹರಿಯೇ |ಅನ್ನಂತ ಮಹಿಮ ಕಾರುಣ್ಯ | ಸಾಗರನೆ ಹರಿನಿನ್ನನೇ ನಂಬಿಹಳೊ | ಭಾವಜ್ಞಮೂರ್ತೇ 2 ಭವ ಶರಧಿ ಸನ್ನುತ ಸ್ವಾಮಿ | ಭೂಮಗುಣ ಧಾಮಾ 3 ಮರುತ ಮತ ತತ್ವಗಳು | ಸ್ಛುರಿಸಲಿವಳಿಗೆ ಹರಿಯೇತರತಮಾತ್ಮಕ ಜ್ಞಾನ | ದರಿವು ವೃದ್ಧಿಸಲೀ |ಹರಿಯ ಸರ್ವೋತ್ತಮತೆ | ಸ್ಥಿರವಾಗಿ ಇವಳೀಗೆಪರಮಸಾಧನ ಮಾರ್ಗ | ಕ್ರಮಿಸುವಂತೆಸಗೋ 4 ಕಾಮಿತಪ್ರದ ದುಷ್ಟ | ಆಮಯವ ಪರಿಹರಿಸಿಈ ಮಹಿಳೆಯುದ್ಧರಿಸೊ | ಸ್ವಾಮಿ ರಾಮಚಂದ್ರಾ |ನಾಮಾಂತ ಇತ್ತುದಕೆ | ಸಾರ್ಥಕವ ಮಾಡೆಂದುಸ್ವಾಮಿ ಗುರು ಗೋವಿಂದ | ವಿಠಲ ಭಿನ್ನವಿಪೆ 5
--------------
ಗುರುಗೋವಿಂದವಿಠಲರು