ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ತಿರುವಂಗೂರು ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ ಪ ಪರಾಕು ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ ಇತ್ತರದ ಸಮಕಟ್ಟಿನಾ ಝಲ್ಲಿಯಾ ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ ದೊತ್ತಿಸಿದ ಕಡಿವಾಣದಾ ಮುಖಾರಂಬದಾ ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ ದೊತ್ತಿ ಕುಣಿಕುಣಿದು ಬರುವಾ ತೇಜಿಯಾ ಅರ್ತಿಯಿಂ ರಾಮರಾವುತನೇರಿ ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ 1 ಸುರರು ಫೌಜಾಗಿ ತೋರಲು ಸೋಮಸೂರಿಯರು ವರಛತ್ರವನುವಾಗಿ ಪಿಡಿದು ನಿಲಲೂ ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ ವರವಾಹನವನೇರಿ ಚರಿಸುತುತ್ಸಾಹದಿಂ ತ್ವರದಿಂದ ನಡೆಯುತಿರಲೂ ಖರದೂಷಣ ತ್ರಿಶಿರ ಮಾರೀಚ ಮೃಗಕುಲವ ತರಿದು ಬೇಟೆಯನಾಡಿದಾ ರಾಮನೂ 2 ದಶಶಿರ ಕುಂಭಕರ್ಣ ಮೊದಲಾಗಿದ್ದ ಖ ಳರ ಖಂಡಿಸಿ ಕದನದಲ್ಲಿ ಗೆಲಿದೂ ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ ಶರಣನನು ಪರಿಪಾಲಿಸಿ ಜಗದೊಳೂ ಪರಿವುತಿಹ ಕಾವೇರಿ ಉತ್ತರದ ಭಾಗದಲಿ ಮೆರೆವ ತಿರುವಂಗೂರಿನಲೀ ಸುಖದಲೀ ಸ್ಮರರೂಪ ವೈಕುಂಠರಾಮ ಬೇಟೆಯನಾಡಿ ಪರಮ ಹರುಷದಿ ಬಂದು ನಿಂದ ಸಂಭ್ರಮದಿ 3
--------------
ಬೇಲೂರು ವೈಕುಂಠದಾಸರು
ಬಿತ್ತಿರೋ ಬೀಜವ ಗಜನಿಗೆ ಮತ್ತೆ ಬೆಟ್ಟಿಗೆ ಬಿತ್ತ ಬಿತ್ತಿದ ಬೀಜ ಬಾರದು ಪ ಒಳ್ಳೆ ಪಾತ್ರನ ನೋಡಿ ವೇದಾಂತ ವೇದ್ಯಗೆ ಬೆಳ್ಳಿ ಸುವರ್ಣ ಗೋದಾನಂಗಳ ಉಲ್ಲಾಸ ದೊಳ ಗೊಂದು ಬುದ್ದಿಯೊಳಿತ್ತರೆ ಎಳ್ಳಷ್ಟು ಮಹಮೇರು ಪರ್ವತವಹುದು 1 ದುಡ್ಡು ದುಗ್ಗಾಣಿಯಾದರು ತನಗುಳ್ಳದು ದೊಡ್ಡ ಕುಟುಂಬ ಶ್ರೋತ್ರಿಯನ ನೋಡಿ ಅಡ್ಡ ಮನಸಿಲ್ಲದಂದದಲಿ ಕೊಟ್ಟೊಡೆ ದೊಡ್ಡ ಪರ್ವತವಾಗಿ ಬೆಳೆವುದು ಕಂಡ್ಯಾ 2 ಬೆಟ್ಟ ಭೂಮಿಗೆ ಬೀಜ ಬಿತ್ತಲು ಬೀಜವು ಕಷ್ಟದಿಂದಲಿ ಬೆಳೆದು ಬರಬೇಕು ಶಿಷ್ಯರಾಗಿರ್ದ ವಿಪ್ರೋತ್ತಮರಿಗೆ ಒಂದು ಕೊಟ್ಟೊಡೆ ಒಂದು ಲಕ್ಷವಾಗುವುದು 3 ಶ್ರದ್ಧೆಯಿಂದಲಿ ನಾರಿ ಮಕ್ಕಳು ಸಹಿತ ಸದ್ಭುದ್ಧಿಯಿಂದಲಿ ದಾನ ಕೊಡಬೇಕು ಶುದ್ಧ ಪಾತ್ರನ ನೋಡಿ ಕೊಟ್ಟೊಡೆ ಅದು ಒಂದು ಉದ್ದಿನ ಕಾಳಷ್ಟು ಪರ್ವತವಹುದು 4 ಯಾರಿಗಾದರೂ ವಿಪ್ರರಿಗೆ ಕೊಡಬಹುದು ವಿ ಚಾರಿಸೆ ಬೆಟ್ಟುಗಜನಿಯಂತರ ಮಾರುತಾತ್ಮಜನ ಕೋಣೆಯ ಲಕ್ಷ್ಮೀರಮಣನ ಚಾರು ದಾಸರಿಗೆ ಇತ್ತರದು ಕೋಟಿ ಫಲವದು 5
--------------
ಕವಿ ಪರಮದೇವದಾಸರು
ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು
ಶ್ರೀ ಮಂಗಳ ದೇವಿಗೆ ಜಯ ಜಯಶ್ರೀ ಮಂಗಳ ದೇವಿಗೆ ಜಯ ಜಯಸ್ವಾಮಿಗೆ ಜಯ ಸ್ವಾಮಿನಿಗೆ ಜಯ ಜಯವೆಂದು ಪಾಡಿ ಜಾನಕಿರಾಮಗಾರತಿಯ ಬೆಳಗಿರೆ ಪ.ಪದುಮಿಣಿಯರು ಪತಿವ್ರÀ್ರತಾಮಣಿಯರುವಿಧುಬಿಂಬದ ಮುಖಿಯರು ಸಖಿಯರುಪದುಮರಾಗದ ಹರಿವಾಣದಿ ಹರಿವಾಣದಿ ಹರಿಮಣಿದೀಪದಕದÀಡಿನಾರತಿಯ ಬೆಳಗಿರೆ 1ಉಲಿವಂದುಗೆಗಾಲಿನ ಮೇಲಿನಕಲಧೌತದ ಇತ್ತರದುತ್ತರಿಥಳಥಳಿಸುವ ಶಶಿರವಿ ಕೋಟಿಗಳ ಕೋಟಿಗಳಗೆಲುವ ರವಿಕುಲ ತಿಲಕಗಾರತಿಯ ಬೆಳಗಿರೆ 2ಅಂಗದವಲಯಾಂಗುಲಿಮುದ್ರಿಕೆರಂಗುಮಾಣಿಕ ಮುತ್ತಿನ ಸರಬಂಗಾರದ ಮೇಲೆವೈಜಯಂತಿವೈಜಯಂತಿ ಪದಕವು ತುಳಸಿಶೃಂಗಾರಗಾರತಿಯ ಬೆಳಗಿರೆ 3ಇಂದಿರೆಸೀತಾರ್ಪಿತಮಾಲಾಕಂಧರಭುವನಾವಳಿಗಪ್ರತಿಸುಂದರ ಸದ್ಗುಣಸಾಂದ್ರಉಪೇಂದ್ರ ಭೂಮಿಜೆÉೀಂದ್ರÀ ಲಕ್ಷ್ಮಣಾಗ್ರಜ ರಾಮ ಚಂದ್ರಗಾರತಿಯ ಬೆಳಗಿರೆ 4ಕುಂಡಲಮುಕುಟಾಂಕಿತ ಸನ್ಮುಖ ಸುಭ್ರೂಹಿತಮಂಡಲ ಗಂಡದಪುಂಡರೀಕಾಭಾನಯನದ ನಯನದ ಘನಶಾಮಲವರಕೋದಂಡಗಾರತಿಯ ಬೆಳಗಿರೆ 5ಋಷಿಮಖವನು ಈಕ್ಷಿಸಿ ರಕ್ಷಿಸಿವಿಷಕಂಠನ ಧನುವ ಮುರಿಹೊಯಿದು ಮುರಿಹೊಯಿದುತುಷಿಸಿದಗಾರತಿಯ ಬೆಳಗಿರೆ 6ಹನುಮನ ಕಂಠದ ಸನ್ಮಣಿಗೆಪಣೆಗಣ್ಣನ ಶ್ರೀ ಜಪಮಣಿಗೆನೆನೆವರ ಚಿಂತಾಮಣಿ ಸೀತಾಶಿರೋಮಣಿಗೆ ಶಿರೋಮಣಿಗೆಪ್ರಸನ್ನವೆಂಕಟ ವನಜೋದ್ಭವಪಿತಗಾರತಿಯ ಬೆಳಗಿರೆ 7
--------------
ಪ್ರಸನ್ನವೆಂಕಟದಾಸರು