ಪತಿಯಿಂದಲೆ ಸದ್ಗಿತಿಯೆಂಬುವಳು
ಅತಿಮತಿಯೆನ್ನುವಳು ನಮ್ಮ ಶ್ರೀದೇವಿ ಪ
ಕ್ಷಿತಿಯೊಳು ತನ್ನಯ ಪತಿಯೊಳು ಸಲ್ಲದೆ
ಇತರವನೆಣಿಪಳೆ ಮೂದೇವಿ ಅ.ಪ
ಗಂಡನು ಪುಂಡನು ಕುರುಡನು ಕುಂಟನು
ಭಂಡಾಂಗನೆಯಂ ಕಲಹಿಪಳೆ ಮೂದೇವಿ 1
ಅತ್ತೆಮಾವನ ಹೇಳಿಕೆಗೆ ಪ್ರ
ತ್ಯುತ್ತರಳಲ್ಲ ಶ್ರೀದೇವಿ
ಕತ್ತೆಯಂತೆ ತಾ ಬಗಳುವ ಕಳ್ಳ
ಚಿತ್ತಿನಿ ಹವುದೆಲೊ ಮೂದೇವಿ 2
ಅರಿಸಿನ ಕುಂಕುಮ ಹಣೆಯೊಳಗಿಡುವಳು ಅಡಿಯಾ
ಗಿರುವಳು ಶ್ರೀದೇವಿ ಅನು-
ಕರಿಸಲು ಬಾರದೆ ಕಳವಳಗೊಳುವಳು
ಕರಠೆಕಮಾನಳು ಮೂದೇವೀ 3
ಶಿರಬಾಗಿ ತನ್ನರಸನ ಸೇವೆಯ
ಹರುಷದೊಳಿರುಪವಳೆ ಶ್ರೀದೇವೀ
ಕರಸಲು ಬಾರದೆ ಕಳವಳಗೊಳುವಳು
ಕರಟಕ ತನುವಳು ಮೂದೇವೀ 4
ಇರುವ ಅತಿಥಿ ಅಭ್ಯಾಗತಗಳಿಗುಪ
ಚರಿಸುವಳೆ ನಮ್ಮ ಶ್ರೀದೇವಿ
ಗುರುವು ತುಲಶಿರಾಮಯೆಂದೆನ್ನುತ ಭಜಿಸದೆ
ಯಿರುವಳೆ ಮೂದೇವೀ 5