ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡುಕೊಡು ವರವನು ತಡವು ಮಾಡದೆ ಎ ನ್ನೊಡೆಯ ಶ್ರೀಹರಿ ಕೃಪೆ ಮಾಡಯ್ಯ ಪ ಬಿಡದಿರೆನ್ನನು ಜಗದೊಡತಿಯಾಣೆ ನಿ ನ್ನಡಿಗಳನೆಂದಿಗೂ ಬಿಡೆನಯ್ಯಾ ಅ.ಪ ಕ್ಷಿತಿಯೊಳಗತಿಶಯ ಪತಿತ ಪಾವನ ಶ್ರೀ ಪತಿ ನೀಗತಿ ಎನುತಿಹೆನಯ್ಯ ರತಿಪತಿಪಿತನೆ ಸುಮತಿಯನು ಪಾಲಿಸಿ ಗತಿಯನು ತೋರಿಪುದೆನಗಯ್ಯ1 ನಿನ್ನ ಪದವ ನಂಬಿ ನಿನ್ನವನೆನಿಸಿದ ಎನ್ನನುಪೇಕ್ಷಿಪರೇನಯ್ಯ ಸನ್ನುತ ನಿನ್ನನು ಮನ್ನಿಸಿ ಕೇಳುವ ಬಿನ್ನಪವಿನಿತೆ ಕೇಳಯ್ಯ 2 ಎಲ್ಲರ ಹೃದಯದೊಳಲ್ಲಿ ನೆಲೆಸಿರುವ ಫುಲ್ಲನಯನ ನೀ ಪೇಳಯ್ಯ ಕಲ್ಲುಮನದಿ ನೀನೊಲ್ಲದೊಡೀ ಜಗ ದಲ್ಲಿ ಪೋಪುದಿನ್ನೆಲ್ಲಯ್ಯ 3 ಪತಿಯಗಲಿದ ಪತಿವ್ರತೆಗೆ ಇತರರಲಿ ರತಿ ಸಂಜನಿಸುವದೇನಯ್ಯ ಗತಿಪತಿಯೆಲ್ಲರಪತಿ ನೀನೆನ್ನುತ ಶ್ರುತಿನುತಿಪುದು ಪುಸಿಯೇನಯ್ಯ 4 ಜಗದೊಳು ನಿನ್ನನೆ ಸುಗುಣಿಯು ಎನ್ನುತ ನಿಗಮವು ಪೊಗಳುತಲಿಹುದಯ್ಯ ಖಗಪತಿಗಮನನೆ ಬಗೆ ಬಗೆಯಲಿ ರತಿ ಸೊಗಯಿಸು ನಿನ್ನೊಳು ಎನಗಯ್ಯ 5 ಸೃಷ್ಟಿನಾಥಪದ ವಿಷ್ಟರ ಭಕ್ತಿಯ ಕೊಟ್ಟರಭೀಷ್ಟವು ಎನಗಯ್ಯ ಇಷ್ಟರ ಮೇಲಿನ್ನು ಲಕ್ಷ ಕೊಟ್ಟರೂ ಎನ ಗಿಷ್ಟವಲ್ಲ ಶ್ರೀ ಕೃಷ್ಣಯ್ಯ 6 ಚರಣಕಮಲದೊಳಗೆರಗುವೆ ಪುಲಿಗಿರಿ ವರದವಿಠಲ ದಯೆಯಿರಿಸಯ್ಯ ಚರಣಶರಣನಿಗೆ ಕರುಣಿಸದಿದ್ದರೆ ಕರುಣಿಗಳರಸರಿನ್ನಾರಯ್ಯ 7
--------------
ವೆಂಕಟವರದಾರ್ಯರು
ಪ್ರಾಣಾ ನೀ ಕಲ್ಯಾಣಗುಣ ಗೀರ್ವಾಣಾದ್ಯರ ಮಣಿ ಜೀವಗಣ ಗುಣಕಾರ್ಯತ್ರಾಣ ಅಗಣಿತಮಹಿಮ ಪ ಇನ್ನೆಣೆಯುಂಟೆ ತ್ರಿಭುವನ ತ್ರಾಣ ನಿನ್ನ ಆಣತಿಯಂತೆ ಪಂಚಪ್ರಾಣ ಅಣುಘನತೃಣ ಮೊದಲು ಪಣೆಗಣ್ಣ ಸುರ ಗಣಾದ್ಯಮರರೊಳಗನವರತ ನೀ ಘನ್ನ ಫಣಿರಾಜಗುರು ನಿನಗೆಣೆಯುಂಟೆ ನೀರಜಭ ಮುಖ್ಯಪ್ರಾಣ ಬಾದರಾ ಯಣನನುಗ ಆನಂದಗುಣಭರಿತ ಕೃತಿರ- ಮಣನ ಸುತೆ ರಮಣ ನೀ ಕ- ರುಣಿಸಿದರುಂಟು ಶ್ರೀಹರಿಯ ಕರುಣಾಅ.ಪ ಮರುತಾ ಶ್ರೀ ಹರಿಯಿಂದಲನವರತ ಪ್ರೇರಿತನಾಗಿ ನಿರುತಾ ಜಗಕಾರ್ಯದೊಳು ಸತತ ನೀ ಬಿಡದಿರೆಡರಿಲ್ಲ ಮರುತಾ ಜಗಚೇಷ್ಟಪ್ರದ ನೀನಹುದೊ ಶಕ್ತಾ ವರ ಮಂತ್ರಿಯಾಗಿ ನೀ ಹರಿಗೆ ಭಕ್ತಾಗ್ರಣಿಯೆ ಯಂತ್ರೋ- ದ್ಧ್ದಾರ ಶ್ರೀ ಹನುಮಂತಾ ಬಲಭೀಮ ಗುರುಮಧ್ವಶಾಂತಾ ತ್ರಿಕೋ ಟಿರೂಪಧರ ಖ್ಯಾತ ಸುರಾಸುರನರೋರಗಗಳನವರತ ಸರ್ವವ್ಯಾಪಾರ ನೀ ನಡೆಸಿ ಪೊರೆವ ಸದ್ಗುರುವರ ಸುಸಮೀರಾ ನೀರಜಾಂಡವ ಕೂರ್ಮರೂಪದೊಳು ನಿಂತು ನೀ ಭಾರವಹಿಸಿ ಮೆರೆದೆ ಶ್ರೀ ವಾಯುಕುವರಾ1 ಸೃಷ್ಟಿಗೊಡೆಯನಿಗೆ ನೀನಿಷ್ಟಪುತ್ರ ನಿನ್ನಷ್ಟುಜ್ಞಾನ ಪರಮೇಷ್ಠಿಗಲ್ಲದೆ ಎಷ್ಟು ನೋಡಿದರು ಇತರರಲಿ ಎಳ್ಳಷ್ಟಿರೆಣೆಯಿಲ್ಲ ತುಷ್ಠಿಪಡಿಸುವೆ ಹರಿಯ ಜೇಷ್ಟದಾಯರ ಶ್ರೇಷ್ಟ ಮೂರುತಿ ಕವಿಶ್ರೇಷ್ಟ ನೀನೆನಿಸಿ ಲಂಕಾ ಶ್ರೇಷ್ಟನೆನಿಸಿದ ದುಷ್ಟದೈತ್ಯನಾ ಮರವನ್ನ ಹುಟ್ಟನಡಗಿಸಿ ಸುಟ್ಟಿ ಲಂಕಪಟ್ಟಣವನ್ನು ಪುಟ್ಟಿದಾಗಲೆ ಬೆಟ್ಟ ಹಿಟ್ಟನು ಮಾಡಿ ಆ ದುಷ್ಟಭಾಷ್ಯಗಳ ಕಷ್ಟ ಪರಿಹರಿಸಿ ನಿ- ರ್ದುಷ್ಟತತ್ವವ ತೋರ್ದೆ ಎಷ್ಟು ಶಕ್ತನು ಜೀವ- ಶ್ರೇಷ್ಠಮೂರುತಿ ಸರ್ವ ಕಷ್ಟ ಹರಿಸಿ ನಿನ್ನ ಇಷ್ಟಭಕುತರ ಸೇವೆ ಕೊಟ್ಟು ಶ್ರೀ ಹರಿಯ ಶ್ರೇಷ್ಠಮೂರುತಿ ತೋರೋ ಇಷ್ಟದಾಯಕ ಗುರು ಶ್ರೇಷ್ಠ ಮಾರುತಿಯೆ2 ಈಶ ಪ್ರೇರಣೆಯಿಂದ ಈ ನಶ್ವರದೇಹದೊಳು ಆ ಸಮಯದಲಿ ಅಪಾನನಿಂದೊಡಗೂಡಿ ಪ್ರಾಣೇಶ ನಿನ್ನಿಂದ ಎಲ್ಲ ಚೇತನವಿಹುದೋ ವಾಸವಾಗಿರುವನಕ ಈ ಶರೀರ ಕಾರ್ಯ ಶಾಶ್ವತ ನಡೆವುದೋ ಕಲ್ಪಾವಸಾನ ಮೋಕ್ಷಪರಿಯಂತ ಲೇಶ ಬಿಡದಲೆ ಬಪ್ಪ ಜಡದೇಹದೊಳು ನೀ ವಾಸವಾಗಿಹೆ ದೇವ ಶಾಶ್ವತನಾಗಿ ಆಯಾಸವಿಲ್ಲದಲೆ ಊಧ್ರ್ವಗಮನದಿ ಪ್ರಾಣ ಅಪಾನನಿಂದಗಲಲೀದೇಹ ಭೂಶಯನ ವಾಸ ಜಡವೆಂದೆನಿಸಿ ಆ ಶರೀರವು ಭೂತಪಂಚಕದಿ ಸೇರುವುದು ಪ್ರಾಣೇಶ ನೀನಾಗ ಹರಿಯನ್ನು ಸೇರುವೆ ಏಸು ಚರಿತೆಯೊ ಅನಿಲ ಶಾಶ್ವತನು ನೀನು ಅಶಾಶ್ವತ ದೇಹಗಳ ಮಾಳ್ಪ ನಿನ್ನಯ ಕಾರ್ಯ ಏಸುಕಾಲಕು ದೇಹದಿಂ ಮೃತರೈಯ್ಯ ಜೀವರು ಶ್ರೀಶನಾತ್ಮಜ ನೀನಮೃತನೆನಿಸೀ ಮೆರೆವೆ ಈಶ ಪ್ರೇರಣೆ ನಿನಗೆ- ನಿನ್ನ ಪ್ರೇರಣೆ ಎಮಗೆ ಅಸುಪತಿಯೆ ನಿನಗಿದು ಹೊಸ ಪರಿಯಲ್ಲವೊ ಮೀಸಲಾಗಿರಿಸು ಶ್ರೀ ವೇಂಕಟೇಶನ ಪಾದ ದಾಸನೆನಿಸೊ ಪವನೇಶ ಉರಗಾದ್ರಿವಾಸ ವಿಠಲನ ದಾಸ ಎನ್ನ ಮನದಾಸೆ ನೀ ಸಲಿಸಿ ನಿಜ ದಾಸಜನ ಸಹವಾಸವಿತ್ತು ಅನಿಶ ಭವ ಪಾಶ ಸಡಿಲಿಸಿ ಸುಖವಾಸವೀಯೊ ಗುರು ಮಾತರಿಶ್ವ 3
--------------
ಉರಗಾದ್ರಿವಾಸವಿಠಲದಾಸರು
ಶ್ರೀಹರಿ ಕೃಪೆಮಾಡಯ್ಯ ಪ ನಿನ್ನಡಿಗಳನೆಂದಿಗೂ ಬಿಡೆನಯ್ಯ ಅ.ಪ. ನೀಗತಿಯೆನುತಿಹೆನಯ್ಯ ತೋರಿಪುದೆನಗಯ್ಯ 1 ನಿನ್ನ ಪದವನಂಬಿ-ನಿನ್ನವನೆನಿಸಿದ-ಯೆನ್ನನು ಪೇಕ್ಷಿಪರೇನಯ್ಯ ಸನ್ನುತ ನಿನ್ನದು ಮನ್ನಿಸಿ ಕೇಳುವ ಬಿನ್ನಪವಿನಿತೆ ಕೇಳಯ್ಯ 2 ಎಲ್ಲರ ಹೃದಯದೊಳಲ್ಲಿ ನೆಲಸಿರುವ ಪುಲ್ಲನಯನನೀ ಪೇಳಯ್ಯ ಕಲ್ಲುಮನದಿನೀ ನೊಲ್ಲದೊಡೀ ಜಗ-ದಲ್ಲಿ ಪೋಪುದಿನ್ನೆಲ್ಲಯ್ಯ3 ಪತಿಯಗಲಿದ ಪತಿವ್ರತೆಗೆ ಇತರರಲಿ ರತಿ ಸಂಜನಿಸುವದೇನಯ್ಯ ನುತಿಪುದು ಪುಶಿಯೇನಯ್ಯ 4 ನಿಗಮವು ಪೊಗಳುತಲಿಹುದಯ್ಯ ಸೊಗಯಿಸುನಿನ್ನೊಳುಯನಗಯ್ಯ 5 ಸೃಷ್ಠಿನಾಥಪದ ವಿಷ್ಟರ ಭಕ್ತಿಯ ಕೊಟ್ಟರಭೀಷ್ಟವು ಯನಗಯ್ಯ ಇಷ್ಟರಮೇಲಿನ್ನು ಲಕ್ಷಕೊಟ್ಟರೂಯನಗಿಷ್ಟವಿಲ್ಲಶ್ರೀ ಕೃಷ್ಣಯ್ಯ 6 ದಯೆಯಿರಿಸಯ್ಯ ಚರಣ ಶರಣನಿಗೆ ಕರುಣಿಸದಿರ್ದರೆ ಕರುಣಿಗಳರಸರಿನ್ನಾರಯ್ಯ 7
--------------
ಸರಗೂರು ವೆಂಕಟವರದಾರ್ಯರು