ಪೇಳ ಸುಲಭವೆ ಜಗದಿ ಕಾಲಮಹಿಮೆಯ ನಮ್ಮ
ಮೂಲ ಪುರುಷನ ದಿವ್ಯ ಲೀಲೆಯಲ್ಲವೆ ಎಲ್ಲ ಅ.ಪ
ಮುಂದೆ ಸ್ತುತಿಪರು ಜನರು ಹಿಂದೆ ಜರಿವರು ಬಹಳ
ತಂದೆ ಬಡವನ ನೀನ್ಯಾರೆಂದು ಕೇಳ್ವರು ಮನದಿ 1
ನೀಚಕೃತ್ಯವ ಮನದಿ ಯೋಚಿಸುತ್ತಲಿ ಸತತ
ನಾಚಿಕೆಯನು ಪೊಂದದೆಲೆ ಯಾಚಿಸುವರು ದ್ರವ್ಯವನು 2
ಸತಿಯರೆಲ್ಲರು ಶುದ್ಧಮತಿಯ ತೊರೆಯುತ ತಮ್ಮ
ಪತಿಯ ಜರಿವರು ಮುದದಿ ಇತರರನ್ನು ಕೋರುವರು 3
ಕಾಲ ಕಳೆದು ಖ್ಯಾತಿ ಪಡೆವರು ಬಹಳ
ಸೋತು ತಮ್ಮ ದ್ರವ್ಯಗಳ ಪಾತಕಗಳ ಮಾಡುವರು4
ಸ್ನಾನ ಜಪತಪ ಪೂಜೆ ಏನನರಿಯರು ದುಷ್ಟ
ಪಾನಗಳನು ಸೇವಿಸುತ ಮಾನ ದೂರ ಮಾಡುವರು 5
ಹರಿಯ ಮಹಿಮೆಗಳನ್ನು ಅರಿಯದಂತೆ ಸಂತತವು
ಧರೆಯ ದುಷ್ಟ ಭೋಗದಲಿ ಕುರಿಗಳಂತೆ ಬೀಳುವರು 6
ಘನ್ನ ಧರ್ಮಗಳೆಲ್ಲ ಶೂನ್ಯವಾಗಿರೆ ಸುಪ್ರ
ಸನ್ನ ಹರಿಯ ಸೇವಕರು ಇನ್ನು ಇರುವುದಚ್ಚರಿಯು7