ಅಪಮೃತ್ಯು ಪರಿಹರಿಸೊ ನಾರಸಿಂಹಕೃಪಣ ವತ್ಸಲ ಹರಿಯೆ ಬಿನ್ನವಿಪೆ ನಿನಗೇ ಪ
ಅನ್ಯರಿಗೆ ಮೊರೆ ಇಡೆನೊ | ನಿನ್ಹೊರತು ಇನ್ನಿಲ್ಲಮನ್ಯು ಸೂಕ್ತೋದಿತನೆ | ಎನ್ನ ಶಿಷ್ಯನಿಗೇಬನ್ನ ಬಡಿಸುವ ರೋಗ | ವನ್ನು ಮೋಚಿಪುದಯ್ಯಅನ್ನಂತ ಮಹಿಮ ಹರಿ | ನಿನ್ನ ಕೃಪೆ ತೋರೋ 1
ಜ್ವರ ಹರಾ ಹ್ವಯನೆಂದು | ವರ ವೇದಮಾನಿಗಳುಪರಿಪರಿಯಲಿಂ ನಿನ್ನ | ಸ್ತೋತ್ರ ಗೈವುದನಅರಿತು ನಿನ್ನಲಿ ನಾನು | ಮೊರೆಯ ಇಡುವೆನೊ ಹರಿಯೆಪರಿಪೊಷಿಸೋ ಇವನ | ಕರುಣರಸ ಪೂರ್ಣ 2
ತಂದೆ ತಾಯಿಯು ನೀನೇ | ಬಂಧು ಬಳಗವು ನೀನೇಇಂದು ಅಂದಿಗು ನೀನೇ | ಎಂದೆಂದು ನೀನೇ |ಕಂದನನು ಸಲಹೆಂದು | ಸಿಂದುಶಯನನೆ ಬೇಡ್ವೆಇಂದಿರಾಪತಿ ಗುರು | ಗೋವಿಂದ ವಿಠಲಾ3