ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾವ ಪಾಪಿಯ ದೃಷ್ಟಿ ತಾಕೀತೋ ಗೋಪಾಲಕೃಷ್ಣಗೆ ಪ. ಪಾಲು ಮೊಸರು ವೊಂದನಾದರು ಯಾವ ಕಾರಣದಿ ಕುಡಿಯಲೊಲ್ಲೆ ಪೇಳೋ ಯೆನಗೆ ಬಾಲಾ ಭೂಪಾಲ ಗುಣಶೀಲಾ 1 ದಾವಪುಣ್ಯವತಿಯ ಕಣ್ಣು ಹತ್ತಿತೋ ನೆಲುವಿಗಿಟ್ಟ ಬೆಣ್ಣೆಯ ಮುಟ್ಟುವುದಿಲ್ಲಾ ಬಟ್ಟಲಲ್ಲಿಡುವೆವೋ 2 ಕಪ್ಪವಾದರು ಇಡುವೇನು ಬಾ ಅಪ್ಪ ವೇಣುಗೋಪಾಲಾ ತುಪ್ಪ ಸಕ್ಕರಿ ನೀಡುವೆನು ಚಪ್ಪರಿಸು ನೋಡುವೆನು ಕಾಳಿಮರ್ಧನಕೃಷ್ಣಗೆ 3
--------------
ಕಳಸದ ಸುಂದರಮ್ಮ
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು