ಹೊಂದಿ ಸುಖಿಸು ಹರಿಯ ಪಾದಾ ಧ್ರುವ
ನಾನಾ ಪುಣ್ಯ ನಿದಾನದಿ ಧರೆಯೊಳು |
ಮಾನವ ಜನುಮಕ ನೀನೀಗ ಬಂದು |
ಪರಿ ತಾ ನಿಜವರಿಯದೆ |
ಜ್ಞಾನ ಶೂನ್ಯನಾಗೇ-ನಿಹುದಣ್ಣಾ 1
ಹಿಡಿವರೇ ಭ್ರಾಂತಿಯ ಜಡಿವರೆ ಮತಿಯ |
ನುಡಿವರೇ ಪುಸಿಯನು ಬಿಡುವರೆ ಸತ್ಯವ |
ಇಡುವರೆ ದುರ್ಗಣ ಸಿಡುವರೆ ಬೋಧಕ |
ಕೆಡುವರೆ ಮರವಿಲಿ ಬಿಡುವರೆ ವ್ಯರ್ಥಾ 2
ಮೂರು ದಿನದ ಸಂಸಾರದೊಳಗ | ಕಂ |
ಸಾರಿಯ ಭಕ್ತಿಯ ಸೇರಿ |
ಸಾರ ಸ್ವಹಿತ ಸಹ |
ಕಾರಿ ಮಹಿಪತಿ ಸಾರಿದ ಬೋಧಾ3