ನಿನ್ನ ಕಂಡೆನು ದೇವ ನಿನ್ನ ಕಂಡೆ
ಘನ್ನ ಮಹಿಮನೆ ಮತ್ತುರೇಶಾ ಕುಂಚೂರವಾಸಾ- ಪ
ಪನ್ನೀರಿನಿಂದ ನಿನ್ನಂಗವನು ತೊಳೆದು ಬಲು
ಚನ್ನಸಿರಿಗಂಧದ ಪನ್ನೆರಡು ನಾಮ ಚೆಲು
ವನ್ನಿರಿಸಿ ಪಣೆಗೂಧ್ರ್ವ ಪುಂಡ್ರ ರಕ್ತಾಕ್ಷತೆಯನು
ಎನ್ನ ಕೈಯಿಂದಲೇ ಇಡುವಂತೆ ನೀನೆ ಮಾಡು 1
ಒಪ್ಪಿಹುದು ಕೊರಳಲ್ಲಿ ಶ್ರೀ ತುಳಸಿ ಮಾಲೆ ನ-
ಕುಸುಮ ನಿಕರ
ತಪ್ಪದಲಿ ಓರಂತೆ ಇಪ್ಪ ಭೂಷಣ ನೋಡಿ
ಒಪ್ಪ ನಿನ್ನೋಜೆಯನ್ನೆಷ್ಟು ಪೊಗಳಲಿ ಹಾಡಿ2
ಮಾನವನು ನಾಮವು ಜ್ಞಾನಿ ಪವಮಾನನೇ
ಮಾನ್ಯವಾಯಿತೆ ನಿನಗೆ ಆಶ್ಚರ್ಯವೋ
ಮಾನ ರಕ್ಷಕ ಸ್ವಾಮಿ ನರಸಿಂಹ ವಿಠ್ಠಲನೇ
ಪ್ರಾಣದೇವಾನೆಂಬ ನಾಮವಿಟ್ಟಿಹನೋ 3