ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೌರಿ ಪ ಸರ್ವಮಂಗಳಮಯನೆ ವಿಧಿತಾತ ಮುದವೀತೊ ಅ.ಪ. ಉದ್ಧವನ ಗುರುವರ್ಯ ನಿರ್ದೋಷ ಗುಣವನಧಿ ನಿದ್ದೆ ಮಾಡುವಗೊಲಿದು ಮುಕ್ತಿ ಇತ್ತೆ ಹದ್ದುಮೀರಿ ಭವದಿ ಬಿದ್ದು ಮೊರೆ ಇಡುತಿಹೆನೊ ಹೃದ್ಧಾಮದಲಿ ನಿನ್ನ ದರುಶನವ ನೀಡೆಯ್ಯ 1 ಮನದಲ್ಲಿ ಮಹಪೂಜೆಕೊಳ್ಳಯ್ಯ ಎನ್ನಿಂದ ಪ್ರಣೀತಪಾಲಕ ಕೃಷ್ಣಪೂರ್ಣ ಪುರುಷ ತೃಣಮೊದಲು ಬ್ರಹ್ಮಾಂಡ ಸರ್ವರಲಿ ಸ್ವಾತಂತ್ರ್ಯ ಅನಿಲಾತ್ಮ ಆನಂದ ಖಣಿ ಕರುಣ ಮಾಡಯ್ಯ 2 ಕೆಸರು ಕಲ್ಕಿದಜ್ಞಾನಕಳವಡುವುದೇ ನಿನ್ನ ಅಸಮ ಮಂಗಳ ಸುಗುಣ ಶ್ರುತಿ ವಿನುತನೆ ದಶಮತಿಯ ಮನದೈವ ನೀ ಕೂತು ಮನದಲ್ಲಿ ವಿಶದ ತಿಳಿಮತಿಯಿತ್ತು ವೈಭವವ ತೋರೆನಗೆ 3 ಜೀವಜಡರಲಿ ಪೊಕ್ಕಾಡುವೆ ಬಹುಲೀಲೆ ಭಾವಸೂತ್ರದಿ ನಮ್ಮ ಕಟ್ಟಿ ಕುಣಿಸಿ ಈ ವಿಧವ ಬಲ್ಲವರ ಮೇಲಾಗಿ ಪಾಲಿಸುವಿ ತಾವೀಶರೆಂಬುವರು ಮುಳುಗುವರು ದುಃಖದಲಿ 4 ದುಷ್ಟಜನ ಸಹವಾಸ ಅಷ್ಟತತ್ವಗಳಲ್ಲಿ ವೃಷ್ಣೀಶ ಬಿಡಿಸಯ್ಯ ಬಂಧ ಕಡಿದು ಇಷ್ಟಾನಿಷ್ಟ ಜೀವರಲಿ ನಿಂತು ನಟಿಸುವ ಗುಟ್ಟುತೋರಿ ಜಯೇಶವಿಠಲನೆ ಕೃಪೆಮಾಡು 5
--------------
ಜಯೇಶವಿಠಲ