ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕನಸಿನಲಿ ನಾ ಪಾಂಡುರಂಗನ ಮಂಡೆ ಇಡುತಲಿ ಪುಂಡಲೀಕ ಚರಣದಲೀ ಪ. ಪಂಡರೀಕ್ಷೇತ್ರದಲಿ ವಿಠ್ಠಲನ ದರ್ಶನಕೆ ದಂಡೆ ಹಾರ ಕೊಂಡು ಪೋಗುತಿರಲೂ ಹಿಂಡು ಜನ ಊಟಕೆಡೆ ಅಣಿಮಾಡುತಿರಲಲ್ಲಿ ಕಂಡು ಸಾಗುತ ಮುಂದೆ ದ್ವಾರದೆಡೆ ಬಂದು 1 ನಂತರದಿ ದ್ವಾರಗಳು ಮುಚ್ಚಿರಲು ಕಂಡು ಬಹು ಚಿಂತಿಸಲು ಅಲ್ಲೊಬ್ಬ ಬರಲು ಅವಗೇ ಅಂತರಂಗವನುಸುರೆ ಕದ ತೆರೆದು ನೋಡೆನಲು ಸಂತೋಷದಿಂದೆರಡು ದ್ವಾರಗಳ ತೆರೆದೇ 2 ರತಿಪತಿಯ ಬಿಂಬ ಶ್ರೀ ಪ್ರದ್ಯುಮ್ನವಿಠ್ಠಲನ ಮೂರ್ತಿಯನೆ ಕಂಡು ಹಾರವನ್ಹಾಕಿ ನಮಿಸಿ ಅತಿ ಪ್ರೀತಿ ಭಕ್ತಿಯಲಿ ಅಪ್ಪಿ ನಾ ಮೈ ಮರತೆ ಸ್ತುತಿಸುತಲಿ ಗೋಪಾಲಕೃಷ್ಣವಿಠ್ಠಲನನಾ 3
--------------
ಅಂಬಾಬಾಯಿ
ಗೋಪಿ ನಿನ್ನ ಬಾಲನ ಮಾಡುವ ಆಟದ ಪರಿಯನು ಪ ತುಡುಗಿಲಿ ಗೋರಸ ಕುಡಿವಾ | ಅವ | ಘಡಿಸಲು ಕಣ್ಣನೆ ಬಿಡುವಾ | ಹಿಡಿಯಲು ಬರೆ ಬೆನ್ಗೊಡುವ | ಅಡಿ | ಇಡುತಲಿ ತಿರುಗದೆ ಓಡುವನವ್ವಾ 1 ಕೊಡಮಸರಿಗೆ ಬಾಯ್ದೆರೆವಾ | ತಾ | ಬೇಡುವ ಪಸರಿಸಿ ಕರವಾ | ಕೊಡಲಿ ದಣಿಯದೆ ಸುರಿವಾ | ನ | ಟ್ಟಡವಿಲಿ ನಿಂದು ಹೊರೆವನವ್ವಾ 2 ಕೊಳಲನೂದಿ ಹೊಳೆವಾ | ಹೆಂ | ಗಳೆಯರ ಸನ್ಮತಿಗಳೆವಾ | ಅಳುಕದೆ ವಾಜಿಲಿ ನಲಿವಾ | ಇಳೆ | ಯೊಳು ಮಹಿಪತಿ ಸುತ ಪ್ರಭು ಲೀಲೆವ್ವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ. ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ 1 ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|2| ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು - ಉದಯಾರ್ಕ ಮಂತ್ರದಿ |3| ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ 4 ಕಂಬು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ 5 ಕಂಬು ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ 6 ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ 7 ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ8 ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ 9
--------------
ಗುರುಗೋವಿಂದವಿಠಲರು
ಬಾ ಬಾ ಬಾ ಮೆಲ್ಲಡಿ ಇಡುತಲಿ ಕರಿಗಿರಿ ನರಹರಿ ಪ. ಪದ್ಮನಾಭ ಹೃ ತ್ಪದ್ಮದಿ ನೆಲಸುತ ಪದ್ಮಿನಿಯೊಡನೇ 1 ದಾಸರ ಮೇಳವ ಶ್ರೀಶನೆ ಕೇಳುತ ವಾಸುದೇವ ನಮ್ಮ ಆಶೆ ಪೂರೈಸಲು 2 ರಂಗ ಉತ್ತುಂಗ ಕಾಳಿಂಗಮರ್ದನ ಯದು ಪುಂಗವ ಶ್ರೀ ಭೂ ಸಂಗದಿ ರಥದಲಿ 3 ಶುದ್ಧ ಸಾತ್ವಕ ನಮ್ಮ ಉದ್ಧಾರಕ ತಂದೆ ಮುದ್ದು ಮೋಹನರಾ ಮುದ್ದಿನ ದೇವನೆ 4 ಆಪದ್ಬಾಂಧರ ಶ್ರೀಪತಿ ಕರುಣದಿ ಗೋಪಾಲಕೃಷ್ಣವಿಠ್ಠಲ ಸರ್ವೇಶ್ವರ5
--------------
ಅಂಬಾಬಾಯಿ
ಬಾಬಾ ಭಾಮಿನಿ ಬಾಬಾ ಭಾಮಾಮಣಿ ಪೀಠಕೆ ಪ. ರತ್ನ ಮಂಟಪದೊಳು ಮುತ್ತಿನಮಣೆನ್ಹಾಕಿ ಮಿತ್ರೆಯರ್ ಕರೆವರು ಈಗ ಎತ್ತ ನೋಡಿದರೂ ಸುತ್ತ ಜ್ಯೋತಿಗಳು ಶಿಸ್ತಿಲಿ ಬೆಳಗುತಿಹುದು 1 ವÀರ ಜರತಾರಿ ಪೀತಾಂಬರನುಟ್ಟು ಸರಗಳು ಹೊಳೆಯುತಲೀಗ ಬೆರಳಿನುಂಗುರ ಥಳಥಳಿಸುತಲಿ ಬೆಡಗನು ತೋರುತಲಿ 2 ಕಡಗ ಕಿಂಕಿಣಿ ಕರದಲಿ ಪೊಳೆಯೆ ಅಡಿ ಇಡುತಲಿ ನೀ ಬೇಗ ಮುಡಿದ ಮಲ್ಲಿಗೆ ಎಡಬಲಕುದುರುತ ಒಡೆಯ ಶ್ರೀ ಶ್ರೀನಿವಾಸನ ಮಡದಿ 3
--------------
ಸರಸ್ವತಿ ಬಾಯಿ
ಲೋಕಮಾತೆಯೆ ದಯಮಾಡೆ ತಾಯೆ ಪರಿ ಪೂಜಿಪೆ ಶ್ರೀಪತಿಯ ಸತಿಯೆ ಪುಲ್ಲನಾಭನ ಕೂಡಿ ಮೆಲ್ಲಡಿ ಇಡುತಲಿ ಉಲ್ಲಾಸದಿಂದಲಿ ಬಂದು ಕಾಯೆ ತಾಯೆ 1 ನಿತ್ಯ ಮಂಗಳನಾಗೆ ಅಚ್ಚುತನರಾಣಿ ನಿಚ್ಚದಿ ಭಕ್ತಿ ಜ್ಞಾನವಿತ್ತು ಕಾಯೆ ತಾಯೆ 2 ವಕ್ಷಸ್ಥಳದಲಿ ನಿಂತೂ ಕಾಯೆ ತಾಯೆ ಪಕ್ಷಿವಾಹನ ರುಕ್ಮಿಣೀಶ ವಿಠಲನ ರಾಣಿ 3
--------------
ಗುಂಡಮ್ಮ
ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೊ |ಕಾಮಧೇನು ಬಂದಂತಾಯಿತು ಸುಖವ ಸುರಿಯಿರೊ ಪಮಕರಕುಂಡಲನೀಲಮುತ್ತಿನ ಚೌಕಳಿ ಇಡುತಲಿ |ಸುಕುಮಾರ ಸುಂದರವಾದ ಉಡುಗೆಯುಡತಲಿ ||ಮುಖದಕಮಲಮುಗುಳನಗೆಯ ಸುಖವ ಕೊಡುತಲಿ |ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ 1ಚೆಂಡು-ಬೊಗರಿ-ಚಿಣ್ಣಿಕೋಲು-ಗಜುಗವಾಡುತ |ದುಂಡುಮಲ್ಲಿಗೆತುಂಬಿಕೊಳಲನೂದಿ ಪಾಡುತ ||ಮಿಂಡೆವೆಂಗಳ ಮುದ್ದು ಮೊಗದ ಸೊಗವ ನೋಡುತ |ಭಂಡುಮಾಡಿ ಭಾಮೆಯರೊಡನೆ ಸರಸವಾಡುತ 2ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು |ಚಿಕ್ಕ ಉಂಗುಟದಿ ಗಂಗೆಯ ಪಡೆದನಾತನು ||ಮಕ್ಕಳ ಮಾಣಿಕ್ಯ ಪುರಂದರವಿಠಲ ರಾಯನು |ಭಕ್ತ ಜನರಿಗೊಲಿದ ನೀನು ಮುಕ್ತಿದಾತನು 3
--------------
ಪುರಂದರದಾಸರು