(ಈ) ಅವತಾರತ್ರಯ
ಆರು ನಿನಗಿದಿರಧಿಕ ಧಾರುಣಿಯೊಳಗೆ ಪ
ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ ಅ.ಪ.
ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊಧ್ರ್ವ ಪುಂಡ್ರಗಳ ಇಡಿಸಿಆರು ಮೂರರಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ 1
ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ 2
ಆರಾರು ಮೇಲೊಂದು ಅಧಿಕ ಲೆಖ್ಖದ ಗ್ರಂಥಸಾರವನು ರಚಿಸಿ ಸಜ್ಜನರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದೆ ಉ-ದಾರ ಶ್ರೀಕೃಷ್ಣನ ದಾಸರೊಳು ದೊರೆಯೆ 3