ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಂಬುವ ಬನ್ನಿರೋ ಅನಂದದೂಟವ ಹಂಬಲಿಸಿ ಸವಿದು ತುತ್ತು ಕೊಂಬ ಬನ್ನಿರೋ ಧ್ರುವ ಬಡಿಸಿಹಿದು ನೋಡಿ ಅನೇಕ ಪರಿಯಲಿ ಎಡಬಲಕೆ ನೋಡಲಾಗದಾನಂದ ಘನಲೀಲೆ 1 ಇಡಿದು ತುಂಬಿದೇ ನಿಧಾನದೂಟವು ನೋಡಲಿಕ್ಕೆ ತೃಪ್ತಿಗೈಸುತಿಹುದು ನೋಟವು 2 ಬೇಡಿಸಿಕೊಳ್ಳದೆ ಬಡಸುತಿಹ್ಯನು ಮೂಢ ಮಹಿಪತಿ ಒಡೆಯ ಭಾನುಕೋಟಿತೇಜನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿರೋ ನಿಜನೋಡಿರೊ ಬಿಡದೆ ಸದ್ಗುರುಪಾದ ಕೂಡಿರೋ ಧ್ರುವ ಇಡಿದು ತುಂಬೆದ ವಸ್ತು ಅಡಿಮೇಲು ತಿಳಿಯದೆ 1 ಗೂಢವಾಗಿದೆ ನೋಡಿ ಗೂಡಿನೊಳಗೆನಿಮ್ಮ 2 ಪಾದ 3 ಇಡಾ ಪಿಂಗಳ ಮಧ್ಯನಾಡಿ ಪಿಡಿದು ನೀವು 4 ಬೇಡಿದ ಪದವೀವ ಮಹಿಪತಿ ಒಡೆಯನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಧ್ರುವ ಸಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ ವಿಕಟಿತಗೊಂಬುದೇನು ಕಾಕ ಬುದ್ಧಿಂದ 1 ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ ಭಿನ್ನವಿಲ್ಲದೆ ನೋಡು ನಿನ್ನೊಳಗೀಗ 2 ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ 3 ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ 4 ಪಾದ ಭೇದಿಸೊ ನೀ ಬ್ರಹ್ಮಬೋಧ ಸಾಧುಸದ್ಗೈಸುವದಾ ಸದ್ವಸ್ತುದ 5 ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ ಸುಲಭವಾಗಿಹ ಬಲ್ಲವರಿಗೆ 6 ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ ಇಹಪರಾನಂದ ಘನ ಸಾಯೋಜ್ಯ ಘನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭವರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ಪ ಚತುರ ವೇದಶಾಸ್ತ್ರ ಮೇಣಷ್ಟಾದಶವಾದಸ್ಮøತಿತರ್ಕ ಪೌರಾಣದಡವಿಯಲ್ಲಿಮತಿವಂತ ಮುನಿಗಳಾರಿಸಿ ತಂದು ತಾವುಪ್ರತಿಗಂಡು ಲೋಕಕ್ಕೆ ಹಿತವಾಗಿ ತೋರುವ 1 ಅಡವಿಯೊಳರಸಿ ಅಗಿಯಲಿಲ್ಲ ತಂದುಇಡಿದು ಚೂರ್ಣವಮಾಡಿ ಒಣಗಿಸಲಿಲ್ಲಕುಡಿದು ಕಹಿಖಾರವೆಂದೆನಲಿಲ್ಲ ನೋಡೆಬಡವ ಬಲ್ಲಿದರೆಲ್ಲರಿಗೆ ಸಾಧ್ಯವಾಗಿಪ್ಪ 2 ಪಥ್ಯಪಾನದ ನೇಮಗಳಿಲ್ಲ ಹೋಗಿಸ್ತೋತ್ರ ಮಾಡಿ ವೈದ್ಯನ ಬೇಡಲಿಲ್ಲನಿತ್ಯಸೇವಿಸೆ ಆಲಸ್ಯಗಳಿಲ್ಲ ನೋಡೆಮತ್ಯಾರ ಮಾತ ನಡೆಸುವ ಬಗೆಯಿಲ್ಲ3 ರಸಪಾಷಾಣಾದಿ ಮೂಲಿಕೆಯನು ತಂದುಕುಶಲದಿ ಶೋಧಿಪ ಕೋಟಲೆಯಿಲ್ಲಮಿಸುಣಿ ವರ್ಣದ ಭಸ್ಮ ತೈಲಗಳೆಂತೆಂಬಫಸಣೆಯಿಲ್ಲದೆ ಗಾಂಧರ್ವರು ಸೇವಿಪ 4 ಒಮ್ಮೆ ಸೇವಿಸೆ ಜನ್ಮ ಜನ್ಮಂಗಳ ದು-ಷ್ಕರ್ಮ ಸವೆದು ಸಕಲಾನಂದವೀವಘಮ್ಮನೆ ಕೃಷ್ಣರಾಯನ ಪುರದಲಿ ಬಿಡದÉಮ್ಮ ರಕ್ಷಿಪ ಮುದ್ದುಕೃಷ್ಣ ಕೃಷ್ಣಯೆಂಬ 5
--------------
ವ್ಯಾಸರಾಯರು
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ ಅತಿಗುಹ್ಯಗೂಢವಿದು ಹಿತೋಪಾಯದ ಖೂನ ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ 1 ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ 2 ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ ಸದ್ಗೈಸಿ ಮಹಿಪತಿಯ ಸದೋದಿತ ಉದಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ ಧ್ರುವ ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ ಹಂಬಲಿಸಿ ನೋಡಿರ್ಯೋ ಗುಂಭ ಗುರುತವ 1 ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ ಥಳಥಳಗುಡುತ ಸುಳುವು ತೋರುತಲ್ಯದೆ ಝಳಝಳಿಸುವ ಪ್ರಭೆ ಮಳೆಮಿಂಚುಗಳು 2 ಇಡಿದು ತುಂಬೇದ ನೋಡಿ ಅಡಿಗಡಿಗಾನಂದದಲಿ ಅಡಿಮೇಲು ತಿಳಿಯದೆ ಎಡಬಲದೊಳಾದ ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು