ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಿನ್ನ ನೀರಜಪಾದ | ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಪ ಅಂಬರೀಷನ ಶಾಪ ಹಿಂಗಿಸಿ ಕಳೆದ ದ- | ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಅ.ಪ ಉಗ್ರನ್ನ ಖಳವಂಚಿಸಿ ತನ್ನ ಕ- | ರಾಗ್ರವಾ ಶಿರದಲ್ಲಿ ಇಡಬರಲು || ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ | ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು1 ಕಾಲದೂತರು ಅಜಾಮಿಳನೆಳೆಯಲು | ನಾಲಿಗೆಯಿಂದ ನಾರಗÀನೆನ್ನಲು || ಆಲಸ್ಯ ಮಾಡದೆ ನಿನ್ನ ದೂತರನಟ್ಟಿ | ಓಲಗ ವೈಕುಂಠವಿತ್ತ ಭಾಂದವನೆಂದು 2 ಭೂತಳದೊಳು ನಿನ್ನನು ಪೋಲುವ | ದಾತರ ನಾನೆಲ್ಲಿ ಕಾಣೆ ಶ್ವೇತವಾಹನ || ದಾತ | ವಿಜಯವಿಠ್ಠಲನಹುದೆಂದು ದೃಢವಾಗಿ 3
--------------
ವಿಜಯದಾಸ