ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಪರಮ ಸ್ವರೂಪ ಧ್ರುವ ಇಡದು ತುಂಬೇದ ನೋಡಿ ಎಡಬಲ ಪೂರ್ಣ ಬಿಡದೆ ಸೂಸುತಲ್ಯದೆ ಜಡಿದು ನಿಧಾನ 1 ಸಂಧಿಸಿಹದು ನೋಡಿ ಹಿಂದೆಮುಂದೆಲ್ಲ ಒಂದು ಮನದಿ ನೋಡಿ ಬಂದು ನೀವೆಲ್ಲ 2 ಬೆಳದುಕೊಂಬುವಂತೆ ಹೊಳೆಯುತವಲ್ಲ ಸುಳುಹು ಶ್ರೀ ಕೃಷ್ಣನ ತಿಳುವವರಿಲ್ಲ 3 ಕಣ್ಣುಗೆಟ್ಟಿರಬ್ಯಾಡಿ ಕಾಣದೆ ಖೂನ ತ ನ್ನೊಳಗದೆ ನೋಡಿ ಸಾನ್ನಿಧ್ಯಪೂರ್ಣ 4 ಭಾಸುತಲ್ಯದೆ ಭಾಸ್ಕರಕೋಟಿ ತೇಜ ದಾಸ ಮಹಿಪತಿ ಪ್ರಾಣದೊಡಿಯ ಸಹಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ನಿಮ್ಮೊಳು ನಿಜಾನಂದಬೋಧ ಕೂಡಿ ಕರುಣಾಸಿಂಧು ಶ್ರೀಗುರುಪಾದ ಧ್ರುವ ಇಡಾ ಪಿಂಗಳ ಮಧ್ಯ ನೋಡಿ ಈಗ ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ ನೋಡಬಲ್ಲಿದೆ ಬ್ರಹ್ಮಾನಂದ ಭೋಗ ಗೂಢವಿದ್ಯವಿದು ತಾ ರಾಜಯೋಗ ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ ಬಡವರಿಗಳವಲ್ಲ ಗೂಢಿನ ಸೊಲ್ಲ 1 ಪಿಡಿದು ಮನಮಾಡಿ ದೃಢನಿಶ್ಚಯ ಬಿಡದೆ ಭೇದಿಸಿನೋಡಿ ಸುಜ್ಞಾನೋದಯ ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ ಪಡೆದುಕೊಳ್ಳಿರೊ ಗುರು ಕರುಣ ದಯ ಮನ ಉನ್ಮನ ಮಾಡಿ ಘನಸುಖದೊಳು ಕೂಡಿ ಅನುದಿನ ನಲಿದಾಡಿ 2 ಮೂರುಗುಣರಹಿತ ಮೂಲರೂಪ ತೋರುತಿಹ್ಯದು ನಿಜ ನಿರ್ವಿಕಲ್ಪ ತರಳ ಮಹಿಪತಿ ಪ್ರಾಣ ಪಾಲಿಪ ಹೊರೆದು ಸಲಹುವ ಗುರುಕಲದೀಪ ಭಾವಿಕರಿಗೆ ಜೀವ ಕಾವ ಕರುಣದೇವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿದರೆ ತನ್ನೊಳಗದೆ ಗೂಢವಾಗದೆ ಧ್ರುವ ಸೋಹ್ಯ ತಿಳಿಯಗೊಡದೆ ಮಾಯ ಮರಿ ಆಗ್ಯದೆ ಕಾಯದೊಳಗೆ ತಾನಾದೆ ಗುಹ್ಯವಾಗ್ಯದೆ 1 ಅಡಿ ಮೇಲು ತಿಳಿಯದೆ ಬಿಡದೆ ಸೂಸುತಲ್ಯದೆ ಹಿಡಿದೇನೆಂದರೆ ಬಾರದು ಇಡದು ತುಂಬ್ಯದೆ 2 ತೋರಿಕೆ ತೋರಿಸದೆ ಪರಿಪೂರ್ಣ ತಾನಾಗ್ಯದೆ ಮೂರುಗುಣಕೆ ಮೀರ್ಯದೆ ಬ್ಯಾರೆ ತಾನದೆ 3 ಕರುಣಿಸಿ ನೋಡುತದೆ ಕರೆದರೋ ಎನುತದೆ ಬ್ಯಾರೆ ನಿರಾಶೆವಾಗ್ಹಾದೆ ಹೊರೆಯುತಲ್ಯದೆ 4 ನೀಲವರ್ಣದೊಳದೆ ಥಳಥಳಗುಡುತದೆ ಮ್ಯಾಲೆ ಮಂದಿರದೊಳದೆ ಲೋಲ್ಯಾಡುತದೆ 5 ಗುರುತ ಕಂಡವಗದೆ ಗುರುಸ್ವರೂಪವಾಗ್ಯದೆ ಗುರು ಕೃಪೆ ಆದವಂಗದೆ ಸಾರಿ ಚಲ್ಯದೆ 6 ದಾಸ ಮಹಿಪತಿಯೊಳದೆ ವಾಸವಾಗ್ಯದೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು