ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿವರನೆ ಮರೆಬಿದ್ದೆ ಶರಣಾಗತಪ್ರೇಮಿ ಪರಿಭವದ ಕಿರಿಕಿರಿಯ ಪರಿಹರಿಸು ಸ್ವಾಮಿ ಪ ಅಡಿಗಡಿಗೆ ರಿಣಕೊಟ್ಟ ಒಡೆಯರತಿಕಿರಿಕಿರಿಯು ಇಡತೊಡಲಿಕ್ಕಿಲ್ಲೆಂಬ ಮಡದಿಕಿರಿಕಿರಿಯು ಎಡಬಿಡದೆ ಹಸೆತೃಷೆಯ ಕಡುತರದಕಿರಿಕಿರಿಯು ಕಡೆಹಾಯ್ಸು ಕಡುಬೇಗ ತಡೀಲಾರೆನಭವ 1 ಮಾಡುಣಲು ಕಿರಿಕಿರಿಯು ಬೇಡುಣಲು ಕಿರಿಕಿರಿಯು ನಾಡ ನಾಡ ತಿರುಗಲು ಕಡುಕಿರಿಕಿರಿಯು ಗೂಢದೊತ್ತಟ್ಟಿರಲು ಬಡತನದ ಕಿರಿಕಿರಿಯು ಖೋಡಿ ಕಿರಿಕಿರಿ ಬೇಡ ದೂರಮಾಡಭವ 2 ಕಿರಿಕಿರಿಲ್ಲದ ನಿನ್ನ ಚರಣದಾಸರ ನೆರೆಯು ಕರುಣಿಸಿ ನಿರುತದಿಂ ಪರಿಪಾಲಿಸಭವ ಶಿರಬಾಗ್ವೆ ಚರಣಕ್ಕೆ ನೀನೆ ಪರದೈವೆನಗೆ ತರಳನರಕೆಯ ಕೇಳು ವರದ ಶ್ರೀರಾಮ 3
--------------
ರಾಮದಾಸರು