ಪ್ರಾಣಪತಿ ಹರಿ ವಿಠಲ | ಪೊರೆಯ ಬೇಕಿವನಾ ಪ
ಕಾಣೆ ನೀನನ್ಯರನು | ಕ್ಷೋಣಿಯೊಳು ಹರಿಯೇ ಅ.ಪ.
ಕೈಶೋರವಯನಿವನು | ಆಶೆಗೈವನು ದೀಕ್ಷೆದಾಸತ್ವದಲಿ ಮಾಳ್ಪ | ವಿಶ್ವಾಸಗಳನೂ |ಕೇಶವನೆ ತೈಜಸೀ | ವೇಷದಲಿ ಗುರುರೂಪಲೇಸಾಗಿ ತೋರಿಸುತ | ಆಶಿಸುತ್ತಿಹನೊ 1
ಗುರು ಹಿರಿಯರ ಸೇವೆ | ದೊರಕಿಸುತ ಇವನೀಗೆಪರತಮಜ್ಞಾನಾದಿ | ವರಸು ಸಾಧನವಾತರಳಂಗೆ ವದಗಿಸುತ | ಹರಿಯೆ ಉದ್ಧರಿಸಿವನಕರುಣಾ ಪಯೋನಿಧಿಯೆ | ಮರುತಾಂತರಾತ್ಮಾ 2
ಕಷ್ಟಗಳ ಪರಿಹರಿಸಿ | ಇಷ್ಟಗಳ ಸಲಿಸುತ್ತಕೃಷ್ಣ ಮೂರುತಿ ಹರಿಯೆ | ಕಾಪಾಡೊ ಇವನಾ |ದುಷ್ಠ ಭಕುತನ ಗೈದು | ಶಿಷ್ಟೇಷ್ಟರಲಿ ಇಟ್ಟುಶ್ರೇಷ್ಠ ಸಾಧನಗೈಸೊ | ಜಿಷ್ಣು ಸಖ ದೇವಾ 3
ಕಲಿಯುಗದಿ ಸಾಧನವು | ಸುಲಭವೆಂದೆನುತಲಲಿತ ವಚನಗಳಿಹವು | ಜಲಜಾಕ್ಷ ಹರಿಯೇ |ಕಲಿಮಲಾಪಹ ನಿನ್ನ | ಸ್ಮರಣೆಯನು ಒದಗಿಸುತಬಾಲಕನ ಸಲಹೆಂದು | ಭಿನ್ನವಿಪೆ ಸತತಾ 4
ನಿತ್ಯ ತವ ಲೀಲೆಗಳ | ಸ್ತುತಿಯನೇಗೈಸಿಕೃತ್ಸನೆಂದೆನಿಸಿವನ | ಸತ್ಯಾತ್ಮ ಹರಿಯೇ |ಸ್ತುತ್ಯ ಗುರು ಗೋವಿಂದ | ವಿಠಲ ಕರುಣಾಳುವೇಭೃತ್ಯನ್ನ ಪೊರೆಯೆಂದು | ಅರ್ಥಿಸುವೆ ನಿನಗೇ 5