ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ಪ
ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ
ಕಟ್ಟಿದ ಹರಕೆಗಳೆಲ್ಲವನು
ಸಿಟ್ಟು ಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು
ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ 1
ಗಂಡ ಹೆಂಡತಿಯು ಮಕ್ಕಳು ಸಹವಾಗಿ
ದಂಡು ಮಾಳ್ಪೆವು ತಾವು ಎನುತಲಿ
ಉಂಡೆವು ಸ್ಥಿರವಾರ ಊಟವ ಏಕವ
ಕಂಡು ಬಹರೆ ಹೋಗುವ ದಯವಾಗುವ 2
ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ
ಸಾಷ್ಟಾಂಗವು ಎರಗಿದರೆ
ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ
ವರಾಹ ನಮ್ಮಪ್ಪ ತಿಮ್ಮಪ್ಪನು 3