ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಗರವು ನೋಡಮ್ಮಯ್ಯರುಕ್ಮಿಣಿಗೆಂಥ ಗರವು ನೋಡಮ್ಮಯ್ಯಕಂತುನಯ್ಯನ ಎನಗಂತ್ರವ ಮಾಡಿದ ಮಂತ್ರವ ಮಾಡಿದಳಮ್ಮಯ್ಯ ಪ. ಹಿಡಿದ ವೀಳ್ಯವ ನಾನು ಕೊಡುವೊ ಸಮಯದಿಬಂದು ಕಿಡಿ ಹಾಕಿದಳು ನೋಡಮ್ಮಯ್ಯಭಾವೆ ಕಿಡಿಯ ಹಾಕಿದಳು ನೋಡಮ್ಮಯ್ಯ ಹುಡುಗೆ ವೀಳ್ಯಕೆ ಮುಖಕೊಡಬಹುದುಕೃಷ್ಣನು ಬಿಡನು ಇವಳದೇನಮ್ಮಯ್ಯಇಂಥ ಭಿಡೆಯು ಇವಳದೇನಮ್ಮಯ್ಯ 1 ಮೋದ ಇಟ್ಟವಳಿಗೆಆದರವಿಲ್ಲ ನೋಡಮ್ಮಯ್ಯಏನೂ ಆದರವಿಲ್ಲ ನೋಡಮ್ಮಯ್ಯ ಕಾಡುತ ಕೊಟ್ಟ ವೀಳ್ಯವ ಮಾಧವಗೆಕೊಟ್ಟರೆ ಹೋದೀತು ಬುದ್ದಿ ನೋಡಮ್ಮಯ್ಯರುಕ್ಮಿಣಿಯಲ್ಲೆ ಹೋದೀತು ಬುದ್ಧಿ ನೋಡಮ್ಮಯ್ಯ 2 ಥಾಟು ಥೀಟಿನ ಭಾವೆ ಮಾಟ ಮಾಡಿದಳೇನಮ್ಮಯ್ಯಬೂಟಕತನ ನೋಡಮ್ಮಯ್ಯಬೂಟಕಗುಣದವಳ ಕೂಟಕೆ ಮೆಚ್ಚಿದಹರಿಯ ಆಟವÀ ನೋಡಮ್ಮಯ್ಯಮರುಳಾಟವ ಹರಿಯ ನೋಡಮ್ಮಯ್ಯ3 ಸೃಷ್ಟ್ಯಾದಿಕರ್ತಗೆ ಇಟ್ಟಳು ಮದ್ದಾನೆ ಧಿಟ್ಟತನವ ನೋಡಮ್ಮಯ್ಯರುಕ್ಮಿಣಿಯ ದಿಟ್ಟತನವ ನೋಡಮ್ಮಯ್ಯಎಷ್ಟು ಧೈರ್ಯವೆಂದು ಕೃಷ್ಣತಾ ಬೆರಗಾಗಿ ಬಿಟ್ಟನುವೀಳ್ಯವ ನೋಡಮ್ಮಯ್ಯ4 ವಟಪತ್ರ ಶಾಯಿಗೆ ಕುಟಿಲ ಮಂತ್ರವಮಾಡೊ ಚಟುಲತನ ನೋಡಮ್ಮಯ್ಯ ಭಾವೆಯ ಚಟುಲತನವ ನೋಡಮ್ಮಯ್ಯಸಟಿಯಲ್ಲ ಇವಳೆದೆ ಕಠಿಣತಿಶÀಯವೆಂದು ಮಿಟಿಮಿಟಿ ನೋಡಿದನಮ್ಮಯ್ಯಕೃಷ್ಣ ಮಿಟಿಮಿಟ ನೋಡಿದನಮ್ಮಯ್ಯ 5 ಭಾಳೆ ದಯಾಳು ಎಂದು ಹೇಳುವ ಶೃತಿಗಳುಕೇಳಿ ಆಟವು ನೋಡಮ್ಮಯ್ಯಹರಿಯ ಕೇಳಿ ಆಟವು ನೋಡಮ್ಮಯ್ಯಕಾಳ ಕೂಟವ ಕೈತಾಳವ ಹಿಡಿದಂತೆಆಳುವನಿವಳ ನೋಡಮ್ಮಯ್ಯಕೃಷ್ಣ ಆಳುವನಿವಳ ನೋಡಮ್ಮಯ್ಯ6 ಸರ್ವದಾ ತನ್ನ ಕೂಡ ಇರಬೇಕೆಂದೆನುತಲಿಎರೆದಳು ತೈಲವ ನೋಡಮ್ಮಯ್ಯಹರಿಗೆ ಎರೆದಳು ತೈಲವಮ್ಮಯ್ಯಭರದಿ ಕೋಪಿಸಿ ಕಣ್ಣು ತೆರೆದು ನೋಡುವರೆನ್ನಧರಿಸಲಿನ್ನೆಷ್ಟು ನೋಡಮ್ಮಯ್ಯನಾ ಧರಿಸಲಿನ್ನೆಷ್ಟು ನೋಡಮ್ಮಯ್ಯ 7 ಪುಂಡರೀಕಾಕ್ಷನ ಕೊಂಡಾಡಿ ಸುಖಿಸುವಹೆಂಡಿರು ಕಡಿಮೆಯೇನಮ್ಮಯ್ಯಹರಿಗೆ ಹೆಂಡಿರು ಕಡಿಮೆಯೇನಮ್ಮಯ್ಯಕೆಂಡವ ತುಂಬಿದ ಮಂಡಿ ತೋರಿಸಿದಂತೆಚಂಡಿಯನಾಳುವ ನಮ್ಮಯ್ಯಕೃಷ್ಣ ಚಂಡಿಯನಾಳುವ ನಮ್ಮಯ್ಯ8 ಧಿಟ್ಟಿಯರಿಬ್ಬರು ಕೋಪ ಬಿಟ್ಟರೆ ಇವರಿಗೆಎಷ್ಟು ಒಲುಮೆ ನೋಡಮ್ಮಯ್ಯನಾ ಎಷ್ಟು ಒಲುಮೆ ನೋಡಮ್ಮಯ್ಯಧಿಟ್ಟ ರಾಮೇಶನಲೆ ಇಟ್ಟರೆ ಇವರಿಗೆಎಷ್ಟರೆ ಗರ್ವ ನೋಡಮ್ಮಯ್ಯಬೇಡಿದ್ದು ಎಷ್ಟರೆ ಗರ್ವ ನೋಡಮ್ಮಯ್ಯ 9
--------------
ಗಲಗಲಿಅವ್ವನವರು
ಕಂಡೆನು ಹರಿಸತಿಯ ಸುರಚಿರದುಂಡ ಕಂಕಣ ಕೈಯ್ಯಾಮಂದಾರ ಮಲ್ಲಿಗೆಯ ಹೆರಳಲಿ ದಂಡೆ ಮುಡಿದ ಪರಿಯ ಪ ಪೈಜಣಯಿಟ್ಟಿಹಳು ಗಳದಿ ಕಟ್ಟಾಣಿಯ ಕಟ್ಟಿಹಳುಹಾಟಕ ಹಾರಗಳು ನೋಳ್ಪರ ನೋಟಕೆ ಹಬ್ಬಗಳು 1 ಹೇಮ ಕಂಚುಕ ಪುತ್ಥಳಿ ಮಾಲೆ ತೂಗುವ ಕಟಿಯು 2 ಸರಸಿಜನುವ ಮುಖಿಯು ನಾಶಿಕ್ಹರಳು ಮುತ್ತಿನ ಗೊನೆಯುಹರಳು ಓಲೆಯ ಪ್ರಭೆಯು ಕರ್ಣದಿ ಕುರುಡು ದ್ರಾಕ್ಷಾಲತೆಯು 3 ಸುಂದರಿ ಶುಭಗಾತ್ರೆ ಸುಖಮಯ ಸಿಂಧೂರ ಪಟಾಕಾ ಮಾತ್ರೆಮುಂದೆ ಫಲದ ಪಾತ್ರೆ ಇಟ್ಟಳು ಬಂದು ಸರಸ ನೇರಿ4 ನಂದಬಾಲನ ಮಡದಿ ಸ್ವಪ್ನದಿ ಬಂದು ನಿಂತಳು ಭರದಿಆನಂದವಾಯ್ತು ಮನದಿ ಕಂಡೆನು ಇಂದಿರೇಶನ ದಯದಿ 5
--------------
ಇಂದಿರೇಶರು
ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ವೀರೆಯ ನೋಡಿರೋ ಅಸುರರ ಮಾರಿಯ ನೋಡಿರೋಶೂರಾದಿ ಶೂರರ ದಾರಿಯ ಹಚ್ಚಿಸಿಮುರಿದ ಮಹಿಷಾಸುರನ ತರಿದಪರಿಶಿಲೋಮನು ಶಕ್ತಿಯ ಪಡೆದು ನಡೆದು ಕಣ್ಕೆಂಪಿಡಿದುಮಸಗುತಲಿಡಲು ಶಕ್ತಿಯ ದೇವಿಯು ಹಿಡಿದೆ ಹಲ್ಲನು ಕಡಿದೆಕೊಸರಿಯೆ ಇಟ್ಟಳು ಅಸುರನ ಎದೆಗೆ ಹೊಯ್ದು ರಕ್ತದಿ ತೊಯ್ದುಬಸವಳಿಯುತ ರಿಶಿಲೋಮನು ಭೂಮಿಗೆ ಬೀಳೆ ಬಹು ಹುಡಿಯೇಳೆ1ವರರುದಗ್ರನು ಗದೆಯನು ಹೊತ್ತು ಬರಲು ದೇವಿಗೆರಗಲುಶರದಿಂದಲಿ ತಲೆಯುರುಳಿಸಿ ಶಿರ ಬೊಬ್ಬಿರಿದು ಡಿಂಬವು ನಡೆದುಭರದಲಿ ಹೊಯ್ದುದು ಗದೆಯಲಿ, ಶರ ಸೋನೆಯ ಸುರಿದು ಖಡ್ಗವಹಿರಿದು ಪರಮೇಶ್ವರಿ ಭಾಪೆನಲು ನಡೆದು ಬಿತ್ತು ಪ್ರಾಣ ಹೋಗಿತ್ತು2ದಳಪತಿಯಹ ಚಿಕ್ಷುರಗೆ ಸಮನೆ ತ್ರಿಣಯನ ಕಾಣೆನು ಎಣೆಯನಹೊಳಕಿದ ನಾನಾಪರಿಆಯುಧದಿ ಮುಂದೆ ಧಿರುಧಿರು ಎಂದೆಒಳ ಹೊಕ್ಕಿರಿದನು ದೇವಿಯ ಶೂಲದಿ ಎದೆಯ ಶೌರ್ಯ ಶರಧಿಯಬಳಿಯದ ದೇವಿಯು ತಪ್ಪಿಸಿ ಶೂಲದಿ ತಿವಿಯೆ ಕಂಗಳ ಮುಗಿಯೆ3ದುಷ್ಟ ಬಿಡಾಲನು ಶರಗಳ ಸುರಿದನು ಮುಚ್ಚೆ ಸುರರೆದೆ ಬಿಚ್ಚೆಎಷ್ಟನು ಹೇಳಲಿ ಮಾಯದಿ ಮುಸುಕಿ ಇರಿದ ಬಹು ಬೊಬ್ಬಿರಿದಮುಷ್ಟಿಯಲಿ ತಿವಿದನು ದೇವಿಯ ಕೋಪವು ಹೆಚ್ಚಿ ತಾನವುಡುಗಚ್ಚಿಬಿಟ್ಟನು ದೇಹವ ದೇವಿಯು ಶೂಲದಿ ತಿವಿಯೆ ರಿಪುಭವವಳಿಯೆ4ಎಡಬಿಡದಲೆ ರೌದ್ರದಿ ಮಹಿಷಾಸುರನೊತ್ತೆ ದೇವಿಯು ಮತ್ತೆಕಿಡಿಕಾರುತ ಹೊಕ್ಕೊದೆದಳು ಬೀಳಲು ಕವಿದು ಶೂಲದಿ ತಿವಿದುಕಡಿದಳು ಕೊರಳನು ತಲೆಯನು ಮೆಟ್ಟಿ ಓಡಿತು ಭಯ ಹಿಮ್ಮೆಟ್ಟಿಮೃಡಚಿದಾನಂದನು ತಾನಾದ ಬಗಳ ಕರುಣಿ ಭಕ್ತರಭರಣಿ5
--------------
ಚಿದಾನಂದ ಅವಧೂತರು