ಹರಿಕೃಪೆಯೋಗ್ಯ ಮುಮುಕ್ಷನು
ಧರಿಯೊಳು ಕಾಂಬ ಪರೋಕ್ಷನು ಪ
ಹಿಂದಿನ ಪುಣ್ಯದಿ ಬಂದೆನೈ ದೇಹದಿ
ಮುಂದಾವಗತಿಯಂದು ಮುಮುಕ್ಷನು
ನೊಂದು ಮನದಿ ಪಶ್ಚಾತ್ತಾಪ ವಿರಕ್ತಿಯ
ಹೊಂದಿದ ದಡದಲಿ ಮುಮುಕ್ಷನು
ನಿಂದು ವಿವೇಕದಿ ಪರಮ ಶುಭೇಚ್ಛವ
ಛಂದದಿ ಹಿಡಿವನು ಮುಮುಕ್ಷನು
ಇಂದಿರೆ ಪತಿಗೋವಿಂದ ಮುಕ್ಕುಂದ ಸಲ
ಹೆಂದು ಮೊರೆಯಿಡುವ ಮುಮುಕ್ಷನು 1
ಅಷ್ಟಮದ ಮುರಿದು ಆರರಿಗಳ
ಇಟ್ಟಣಿ ಗಿಡಿಸುವ ಮುಮುಕ್ಷನು
ದುಷ್ಟತನ ಬಿಡಿಸಿ ಮನನಿನ ಮಲ್ಲನೆ
ಕಟ್ಟಲೆಳಿರಿಸುವ ಮುಮುಕ್ಷನು
ನಿಷ್ಠೆಯಿಂದಲಿ ಗುರುಚರಣ ವಭಕುತಿಲಿ
ಮುಟ್ಟಿಭಜಿಸುವನು ಮುಮುಕ್ಷನು
ಇಷ್ಟಸ್ವಧರ್ಮಪಕರ್ಮಗಳನ್ನು ಕಾಮ್ಯವ
ಬಿಟ್ಟು ನಡೆಸುತಿಹ ಮುಮುಕ್ಷನು 2