ಅಚ್ಯುತ ಅಡಿಗಡಿ
ಗೆಚ್ಚರಿಕ್ಹೇಳುತಾನೋ ಪ
ಮೆಚ್ಚಿ ಬಿಡದೆ ಎನಗೆಚ್ಚರಿಕ್ಹೇಳುತಾನೋ
ಹುಚ್ಚರಾಗಿ ಇಹ್ಯಮೆಚ್ಚಲು ಮುಂದೆಮ
ಕಿಚ್ಚುಕಾಣೆನುತಾನೋಅ.ಪ
ನಿಂದೆ ಬಿಡೆನ್ನುತಾನೋ ಜಗವಿದು
ಕುಂದುವುದೆನುತಾನೋ ನಿನಗಿದು
ಒಂದು ಇಲ್ಲೆನುತಾನೋ ಬಂದದ್ದು ತಿಳೀದಿರೆ
ಮುಂದೆ ನಿನಗೆ ಭವಬಂಧ ಬಿಡದೆನುತಾನೋ 1
ನಿಶ್ಚಲಾಗೆನ್ನುತಾನೋ ಮನ ಬಹು
ಸ್ವಚ್ಛಮಾಡೆನ್ನುತಾನೋ ತನು
ಮುಚ್ಚಿ ಭಜಿಸೆನ್ನುತಾನೋ ಬಚ್ಚಿಟ್ಟು ಭಜಿಸಲು
ಇಚ್ಛೆಯಂತಿರ್ದು ನಿನ್ನ ಮೆಚ್ಚಿಕೊಂಬೆನ್ನುತಾನೋ 2
ಮರೆವು ತಾರೆನುತಾನೊ ನಿಚ್ಚವಾ
ದರಿವು ತಿಳಿಯೆನುತಾನೋ
ಅರಿವಿನ ಕುರಹು ಕಾಣೆನುತಾನೋ ಪರಮ ಶ್ರೀರಾಮನ
ತರಣಿ ಕಂಡು ಹರಷದ್ಹಾಡೆನುತಾನೋ 3