ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ
ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು
ಬಣ್ಣವು ಮಾಸಿದ ನೋವು ಬಲುಹಾದ ನೋವು
ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು
ಬಣ್ಣನೆ ನುಡಿಯ ನೋವು ಬಂದೀತು ನೋವು 1
ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು
ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು
ಇಷ್ಟರು ಇಲ್ಲದ ನೋವು ಇಂತಾದ ನೋವು 2
ಬಡವನಾಗಿಹ ನೋವು ಒಡೆಯರಿಲ್ಲದ ನೋವು
ಕೇಡುಗರ ನುಡಿಯ ನೋವು ಕೆಟ್ಟಿಹ ನೋವು
ಪಡೆದ ಕರ್ಮದ ನೋವು ಪಾಪವೆಂಬುದು ನೋವು
ಕಡೆಯ ಕಾಲದ ನೋವು ಕಾಳಾಹಿ ನೋವು 3
ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು
ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು
ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು
ಬದ್ಧವಾಗಿಹ ನೋವು ಬಳಲುವ ನೋವು 4
ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ
ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ
ಅಂತರಂಗದಿ ಬಂದು ಚಿಂತಿತಾರ್ಥತವನೀಯೊ
ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ 5