ಪಾದ ಕಂಡೆ ಕಂಡೆನು ಕೇಶವಾ ಪ
ಪದ್ಮದಳಾಕೃತಿಯಲ್ಲಿರುತಿರುವಂಥ
ನಿತ್ಯ ನಿಲಿದಾಡುವಂಥ
ಪದ್ಮಾಕ್ಷಿ ಶ್ರೀದೇವಿ ಸೇವಿಸುತಿರುವಂಥ
ಮೋದದಿ ಹೃದಯದಿ ನೆಲೆಸಿರುವಂಥ 1
ದುಷ್ಟರ ತಲೆಯನ್ನು ಪಿಡಿದೊತ್ತಿ ತರಿದಂಥ
ಭ್ರಷ್ಟರ ಯೆದೆ ಮೇಲಿಟ್ಟುರುವಂಥ
ನಿತ್ಯ ಪೂಜಿಸುತಿರುವಂಥ
ಶಿಷ್ಟರ ಕಷ್ಟವ ಸಿಗಿದೊಗೆವಂಥ 2
ಅಂಧಕಾರವ ಬೇಗ ಹರಿದು ಪಾಲಿಸುವಂಥ
ಸೂನು ಇಚ್ಛಿಸಿದಂಥ
ಚಂದದಿ ಬಲಿಯ ಪಾತಾಳಕ್ಕೆ ತುಳಿದಂಥ
ಅಂದದಿ ನರನ ಸಾರಥಿಗೊಪ್ಪುವಂಥ 3
ಸುರರು ಕಿಂನರರು ಕಿಂಪುರುಷರೇ ಮೊದಲಾದ
ಸುರಗಣ ಸೇವಿಪ ಭಜಿಪ ಪಾದವನು
ಸರಸದಿ ಭಕ್ತರ ಸಲಹೆ ರಕ್ಕಸರನ್ನು
ತರಿದ ಶ್ರೀ ಚನ್ನಕೇಶವನ ಪಾದವನು 4